FLOWER SAMOSA ಫ್ಲವರ್ ಸಮೋಸ
ಮಾಡುವ ವಿಧಾನ:-
4 ಆಲೂಗಡ್ಡೆ ಬೇಯಿಸಿ ಸಿಪ್ಪೆಯನ್ನು ತೆಗೆದು ತುರಿದಿಡಿ. ಬಾಣಲೆಯಲ್ಲಿ 2 ಚಮಚ ಎಣ್ಣೆ ಹಾಕಿ ಜೀರಿಗೆ, 1/2 ಇಂಚು ತುರಿದ ಶುಂಠಿ, 1/2 ಚಮಚ ಹಸಿ ಮೆಣಸಿನಕಾಯಿ ತುರಿ, 1/2 ಚಮಚ ಗರಂ ಮಸಾಲಾ, 1/2 ಚಮಚ ಆಮ್ ಚೂರ್ ಪುಡಿ, 1/4 ಚಮಚ ಧನಿಯಾ ಪುಡಿ, ಉಪ್ಪು, ಆಲೂಗಡ್ಡೆ ತುರಿ ಹಾಕಿ ಕಲೆಸಿ ಸ್ವಲ್ಪ ಹೆಚ್ಚಿದ ಕೊತ್ತಂಬರಿ ಸೊಪ್ಪು ಹಾಕಿ ಒಲೆಯಿಂದ ತೆಗೆದಿಡಿ. ಈಗ ಆಲೂ ಮಿಶ್ರಣ ರೆಡಿ ಆಯ್ತು.
1 ಅಳತೆ ಚಿರೋಟಿ ರವೆ, 1/2 ಅಳತೆ ಮೈದಾ, 1/2 ಟೀ ಚಮಚ ಓಂ ಕಾಳು, ಉಪ್ಪು, 1 ಚಮಚ ಕಾದ ಎಣ್ಣೆ ಹಾಕಿ ಚೆನ್ನಾಗಿ ಕಲೆಸಿ ಸ್ವಲ್ಪ ನೀರು ಹಾಕಿ ಗಟ್ಟಿಯಾಗಿ ಹಿಟ್ಟು ಕಲೆಸಿ 10 ನಿಮಿಷ ಮುಚ್ಚಿಡಿ.
ಪೂರಿ ಉಂಡೆಗಿಂತ ಸ್ವಲ್ಪ ದೊಡ್ಡ ಉಂಡೆ ಮಾಡಿ ತೆಳ್ಳಗೆ ಲಟ್ಟಿಸಿ ಚೌಕಾಕಾರವಾಗಿ ಕಟ್ ಮಾಡಿ. ನಂತರ ನಾಲ್ಕು ಮೂಲೆಗಳನ್ನು ಒಂದೇ ಕಡೆ ಸೇರಿಸಿ. (ಚಿತ್ರ ನೋಡಿ) ನಂತರ ಅದನ್ನು ತಲೆಕೆಳಗು ಮಾಡಿ ಅಂಚುಗಳಿಗೆ ನೀರು ಸವರಿ. ಮಧ್ಯದಲ್ಲಿ ಆಲೂ ಮಿಶ್ರಣ 1 ಚಮಚ ಇಟ್ಟು ನಾಲ್ಕು ಮೂಲೆಗಳನ್ನು ಸ್ವಲ್ಪ ಎಳೆದು ಸೇರಿಸಿ (ಮೋದಕದಂತೆ). ಅಂಚುಗಳನ್ನು ಒತ್ತಿ ನಿಧಾನವಾಗಿ ಹಿಂದೆ ಮೊದಲೇ ಮಡಚಿದ್ದ ಭಾಗಗಳನ್ನು ಬಿಡಿಸಿ. ಈಗ ಸಮೋಸ ಹೂವಿನ ಹಾಗೆ ಕಾಣುತ್ತದೆ.
ಎಲ್ಲಾ ಸಮೋಸಗಳು ಸಿದ್ಧವಾದ ಮೇಲೆ ಕಾದ ಎಣ್ಣೆಯಲ್ಲಿ ಗರಿ ಗರಿಯಾಗಿ ಕರಿದು ಟೊಮೇಟೊ ಸಾಸ್ ಅಥವಾ ಪುದೀನಾ ಚಟ್ನಿ ಜೊತೆಗೆ ತನ್ನಬಹುದು.
ಧನ್ಯವಾದಗಳು