DRY FRUITS SHANKARA POLI ಡ್ರೈ ಫ್ರೂಟ್ಸ್ ಶಂಕರ ಪೋಳಿ

Categories: Kannada, Tindi TinisuPublished On: November 29, 20170 Comments0 min read
Indu Jayaram
SHARE
ಡ್ರೈ ಫ್ರೂಟ್ಸ್ ಆರೋಗ್ಯಕ್ಕೆ ಬಹಳ ಒಳ್ಳೆಯದು. ಅದರಲ್ಲೂ ಬೆಳೆಯುತ್ತಿರುವ ಮಕ್ಕಳಿಗೆ ಮತ್ತಷ್ಟು ಒಳ್ಳೆಯದು! ಮಕ್ಕಳು ಸಿಹಿ ತಿಂಡಿಗಳನ್ನು ಬಹಳ ಇಷ್ಟ ಪಟ್ಟಿ ತಿನ್ನುತ್ತಾರೆ. ಡ್ರೈ ಫ್ರೂಟ್ಸ್ ಹಾಕಿ ಸಿಹಿ ತಿಂಡಿ ಮಾಡಿಕೊಡಿ ಮತ್ತಷ್ಟು ಇಷ್ಟ ಪಟ್ಟು ತಿನ್ನುತ್ತಾರೆ!

ಡ್ರೈ ಫ್ರೂಟ್ಸ್ ಶಂಕರ ಪೋಳಿ ಮಾಡುವ ವಿಧಾನ:

   

1 ಬಟ್ಟಲು ಮೈದಾ, 1/4 ಬಟ್ಟಲು ಚಿರೋಚಿ ರವೆ, 2 ಚಮಚ ಅಕ್ಕಿ ಹಿಟ್ಟು, 1/2 ಬಟ್ಟಲು ಸಕ್ಕರೆ ಪುಡಿ, ಚಿಟಿಕೆ ಏಲಕ್ಕಿ ಪುಡಿ, 1 ಚಮಚ ಬೆಣ್ಣೆ/1 ಚಮಚ ಕಾದ ಎಣ್ಣೆ ಪಾತ್ರೆಯಲ್ಲಿ ಹಾಕಿಡಿ.

   

20 ಬಾದಾಮಿ, 20 ಗೋಡಂಬಿ, 8 ವಾಲ್ ನಟ್, 15 ಪಿಸ್ತಾ ಇಷ್ಚು ನುಣ್ಣಗೆ ಪುಡಿ ಮಾಡಿ ಮೈದಾ ಮಿಶ್ರಣಕ್ಕೆ ಹಾಕಿ ಚೆನ್ನಾಗಿ ಕಲೆಸಿ ಸ್ವಲ್ಪ ನೀರು ಸೇರಿಸಿ ಗಟ್ಟಿಯಾಗಿ ಕಲೆಸಿ 10 ನಿಮಿಷ ಮುಚ್ಚಿಡಿ.

    

ಚಪಾತಿ ಉಂಡೆಗಿಂತ ಸ್ವಲ್ಪ ದಪ್ಪ ಉಂಡೆ ತೆಗೆದುಕೊಂಡು ತೆಳ್ಳಗೆ ಲಟ್ಟಿಸಿ ನಿಮಗೆ ಬೇಕಾದ ಆಕಾರದಲ್ಲಿ ಕಟ್ ಮಾಡಿ ಕಾದ ಎಣ್ಣೆಯಲ್ಲಿ ಕಡಿಮೆ ಉರಿಯಲ್ಲಿ ಗರಿ ಗರಿಯಾಗಿ ಕರಿದು ಗಾಳಿಯಾಡದ ಡಬ್ಬದಲ್ಲಿ ಹಾಕಿಟ್ಟರೆ 1 ವಾರದ ತನಕ ಗರಿ ಗರಿಯಾಗಿ ಇರುತ್ತದೆ.

ಡ್ರೈ ಫ್ರೂಟ್ಸ್ ಹಾಕಿರುವುದರಿಂದ ಬಣ್ಣ ಸ್ವಲ್ಪ ಕಂದು ಇರುತ್ತದೆ! ಬೆಳ್ಳಗೆ ಇರುವುದಿಲ್ಲ!

ಧನ್ಯವಾದಗಳು.

About the Author: Indu Jayaram

Indu Jayaram is a homemaker and regularly writes on home cooked food. She has more than 10,000 followers in her facebook page https://www.facebook.com/pg/indumathijayaram/

Leave A Comment