ಮನೆಗೆ ಇದ್ದಕ್ಕಿದ್ದಂತೆ 4 ಜನ ಊಟದ ಸಮಯದಲ್ಲಿ ಬಂದಿದ್ದಾರೆ, ಅಯ್ಯೋ ದೇವರೇ ಏನಪ್ಪಾ ಮಾಡೋದು ಅಂತ ಯೋಚನೆ ಮಾಡಬೇಡಿ! ಫಟಾಫಟ್ ಅಂತ 10 ನಿಮಿಷದಲ್ಲಿ ರುಚಿಯಾಗಿ, ಸುಲಭವಾಗಿ ಮಾಡುವ ರೆಸಿಪಿ ನಿಮಗಾಗಿ!

ಮಾಡುವ ವಿಧಾನ:!-

   

4 ಟೊಮೇಟೊ ತೊಳೆದು ಸಣ್ಣಗೆ ಹೆಚ್ಚಿಡಿ. 1 ಬೆಳ್ಳುಳ್ಳಿ ಸಿಪ್ಪೆಯನ್ನು ಬಿಡಿಸಿಡಿ. ಟೊಮೇಟೊ, ಬೆಳ್ಳುಳ್ಳಿ, 3 ಹಸಿ ಮೆಣಸಿನಕಾಯಿ, 1 ಚಮಚ ಜೀರಿಗೆ, 1 ಚಮಚ ಕರಿ ಮೆಣಸು ಹಾಕಿ ನೀರು ಹಾಕಿದೆ ನುಣ್ಣಗೆ ರುಬ್ಬಿಕೊಳ್ಳಿ.

   

ಬಾಣಲೆಯಲ್ಲಿ 2 ಚಮಚ ಎಣ್ಣೆ ಹಾಕಿ, ಸಾಸಿವೆ, ಕರಿಬೇವು, ಚಿಟಿಕೆ ಅರಿಶಿಣ ಹಾಕಿ ನಂತರ ರುಬ್ಬಿದ ಟೊಮೇಟೋ ಹಾಕಿ ಸ್ವಲ್ಪ ಹಸಿ ವಾಸನೆ ಹೋಗುವವರೆಗೆ ಕುದಿಸಿ ಉಪ್ಪು, ಸ್ವಲ್ಪ ನೀರು ಹಾಕಿ ಕುದಿಸಿದರೆ ರುಚಿ ರುಚಿಯಾದ, ಆರೋಗ್ಯಕರ ದಿಢೀರ್ ಟೊಮೇಟೊ ರಸಂ ಸಿದ್ಧ! ಅನ್ನದ ಜೊತೆಗೂ ಸೈ! ಹಾಗೇ ಕುಡಿಯಲು ಸೈ!

ಬೆಳ್ಳುಳ್ಳಿ ಇಷ್ಟವಿಲ್ಲದವರು ಇದೇ ವಿಧಾನದಲ್ಲಿ ಒಗ್ಗರಣೆ ಮಾಡುವಾಗ ಇಂಗು ಹಾಕಿ ಮಾಡಬಹುದು!

ಧನ್ಯವಾದಗಳು