CHANNA BATURA ಚನ್ನಾ ಬತೂರ

Categories: Kannada, upaharaPublished On: November 29, 20170 Comments0.5 min read
Indu Jayaram
SHARE
ಜನ ಪ್ರಿಯ ತಿಂಡಿ. ಹೋಟೆಲ್ ನಲ್ಲಿ ಹೋದಾಗ ತಪ್ಪದೆ ತಿನ್ನುವ ತಿಂಡಿ. ಮನೆಯಲ್ಲಿ ಸುಲಭವಾಗಿ, ರುಚಿಯಾಗಿ, ಶುಚಿಯಾಗಿ ಮಾಡುವ ರೆಸಿಪಿ ಇಲ್ಲಿದೆ.

ಚನ್ನಾ (ಚೋಲೆ) ಮಾಡುವ ವಿಧಾನ:-

100 ಗ್ರಾಂ ಕಾಬೂಲ್ ಕಡಲೆ ಕಾಳು ತೊಳೆದು ರಾತ್ರಿ ನೆನೆಸಿಡಿ.

   

1 ಚಮಚ ಗಸಗಸೆ, 6 ಗೋಡಂಬಿ ಬಿಸಿನೀರಲ್ಲಿ 1 ಗಂಟೆ ನೆನೆಸಿ ನುಣ್ಣಗೆ ರುಬ್ಬಿ. 1 ಟೊಮೇಟೋ ಬಿಸಿ ನೀರಲ್ಲಿ ಹಾಕಿ ಸಿಪ್ಪೆ ತೆಗೆದು ಗೋಡಂಬಿ ಜೊತೆ ಮತ್ತೆ ರುಬ್ಬಿ. ( ಸಾಮಾನ್ಯವಾಗಿ ಚೋಲೆ ಮಾಡುವಾಗ ರುಬ್ಬಿ ಹಾಕೋಲ್ಲ, ಆದರೆ ಹೀಗೆ ರುಬ್ಬಿ ಮಾಡಿದರೆ ಗ್ರೇವಿ ಗಟ್ಚಿಯಾಗಿ, Rich ಆಗಿ ಬರುತ್ತೆ. ನಿಮಗೆ ಬೇಕಾದರೆ ಹಾಕಿ)

1 ಈರುಳ್ಳಿ, 2 ಟೊಮೇಟೋ ಸಣ್ಣಗೆ ಹೆಚ್ಚಿಡಿ.

ಕುಕ್ಕರಿನಲ್ಲಿ 4 ಚಮಚ ಎಣ್ಣೆ ಹಾಕಿ, ಜೀರಿಗೆ, ಹೆಚ್ಚಿದ ಈರುಳ್ಳಿ, ಟೊಮೇಟೋ ಹಾಕಿ ಸ್ವಲ್ಪ ಬಾಡಿಸಿ 1 ಚಮಚ ಜಿಂಜರ್ ಗಾರ್ಲಿಕ್ ಪೇಸ್ಟ್, 1 ಚಮಚ ಖಾರಾ ಪುಡಿ, 1/2 ಚಮಚ ಗರಂ ಮಸಾಲ, 1 ಚಮಚ ಚೋಲೆ ಮಸಾಲೆ, ಉಪ್ಪು, ನೆನೆಸಿದ ಕಾಳು, ರುಬ್ಬಿದ ಮಿಶ್ರಣ ಹಾಕಿ ಚೆನ್ನಾಗಿ ಕಲೆಸಿ, ಸ್ವಲ್ಪ ನೀರು ಸೇರಿಸಿ 4 ವಿಷಲ್ ಕೂಗಿಸಿ, ಕೊನೆಯಲ್ಲಿ ಹೆಚ್ಚಿದ ಕೊತ್ತಂಬರಿ ಸೊಪ್ಪು, 1/2 ನಿಂಬೆ ರಸ (ಬೇಕಾದರೆ) ಹಾಕಿ ಬತೂರ ಜೊತೆ ಬಡಿಸಿ.

ಹೀಗೆ ಕಾಳನ್ನು ಮಸಾಲೆ ಜೊತೆ ಬೇಯಿಸುವರಿಂದ ಚೋಲೆ ರುಚಿ ತುಂಬಾ ಚೆನ್ನಾಗಿರುತ್ತದೆ!

 

ಬತೂರ

ಹೋಟೆಲ್ ನಲ್ಲಿ ಚನ್ನಾ ಜೊತೆ ಕೊಡುವ ದೊಡ್ಡ ಪೂರಿ!

   

ಮಾಡುವ ವಿಧಾನ:- 1/2 ಬಟ್ಟಲು ಮೈದಾ, 1/2 ಬಟ್ಟಲು ಗೋಧಿ ಹಿಟ್ಚು, 1/4 ಬಟ್ಟಲು ಚಿರೋಟಿ ರವೆ, 2 ಚಮಚ ಅಕ್ಕಿ ಹಿಟ್ಟು, ಉಪ್ಪು, ಚಿಟಿಕೆ ಸಕ್ಕರೆ, 1 ಚಮಚ ಕಾದ ಎಣ್ಣೆ ಹಾಕಿ ಚೆನ್ನಾಗಿ ಕಲೆಸಿ ಸ್ವಲ್ಪ ನೀರು ಸೇರಿಸಿ ಪೂರಿ ಹಿಟ್ಟು ಕಲೆಸಿಡಿ. 15 ನಿಮಿಷ ನೆನೆಯಲು ಬಿಟ್ಚು ನಿಮಗೆ ಬೇಕಾಗುವ ಅಳತೆಯ ಪೂರಿ ಹಿಟ್ಚಿನ ಉಂಡೆ ತೆಗೆದುಕೊಂಡು ಪೂರಿ ಲಟ್ಟಿಸಿ ಕಾದ ಎಣ್ಣೆಯಲ್ಲಿ ಹಾಕಿ ಜಾಲರದಿಂದ ಮೆತ್ತಗೆ ಒತ್ತಿ ಪೂರಿ ಉಬ್ಬುವಂತೆ ಮಾಡಿ ಎರಡೂ ಕಡೆ ಬೇಯಿಸಿ Kitchen towel ಮೇಲೆ ಹಾಕಿ ಹೆಚ್ಚಿನ ಎಣ್ಣೆ ತೆಗೆದು ಚನ್ನಾ ಜೊತೆ ಹೆಚ್ಚಿದ ಈರುಳ್ಳಿ ಜೊತೆ ತಿನ್ನಲು ಕೊಡಿ.

ದೊಡ್ಡ ಪೂರಿ ಮಾಡಲು ಹೆಚ್ಚು ಎಣ್ಣೆ ಹಾಕಬೇಕು. ನಿಮಗೆ ಅನುಕೂಲವಾಗುವ ರೀತಿ ಮಾಡಿರೊಳ್ಳಿ.

ನಾನು 1/2 ಬಟ್ಟಲು ಗೋಧಿ ಹಿಟ್ಟು ಹಾಕಿದ್ದೇನೆ, ನೀವು ಬೇಕಾದರೆ ಕೇವಲ ಮೈದಾ ಮತ್ತು ಚಿರೋಟಿ ರವೆ ಹಾಕಿ ಮಾಡಬಹುದು.

ಧನ್ಯವಾದಗಳು.

About the Author: Indu Jayaram

Indu Jayaram is a homemaker and regularly writes on home cooked food. She has more than 10,000 followers in her facebook page https://www.facebook.com/pg/indumathijayaram/

Leave A Comment