ಬೆಂಡೆಕಾಯಿ ತುಂಬಾ ಜನ ಇಷ್ಟ ಪಟ್ಟು ತಿನ್ನುವ ತರಕಾರಿ! ಆರೋಗ್ಯಕ್ಕೆ ಕೂಡಾ ಬಹಳ ಒಳ್ಳೆಯದು. ಬೆಂಡೆಕಾಯಿಯ ಒಂದು ರುಚಿ ರುಚಿಯಾದ ರೆಸಿಪಿ ಇಲ್ಲಿದೆ!

ಮಾಡುವ ವಿಧಾನ:-

1/2 ಕೇಜಿ ಎಳೆಯ ಬೆಂಡೆಕಾಯಿ ತೊಳೆದು ಒರಸಿ ತೊಟ್ಟು ತೆಗೆದು ಉದ್ದಕ್ಕೆ ಸೀಳಿ 1 ಇಂಚು ಉದ್ದಕ್ಕೆ ಹೆಚ್ಚಿಡಿ.

   

ಬಾಣಲೆಯಲ್ಲಿ 4 ಚಮಚ ಎಣ್ಣೆ ಹಾಕಿ ಬೆಂಡೆಕಾಯಿ ಹಾಕಿ 3/4 ಭಾಗ ಬೇಯುವಷ್ಟು ಗರಿ ಗರಿಯಾಗಿ ಹುರಿದಿಡಿ.

   

ಬೇರೆ ಬಾಣಲೆಯಲ್ಲಿ 2 ಚಮಚ ಎಣ್ಣೆ ಹಾಕಿ ಜೀರಿಗೆ, 3 ಚಮಚ ಕಡಲೇ ಹಿಟ್ಟು ಹಾಕಿ ಸ್ವಲ್ಪ ಹಸಿ ವಾಸನೆ ಹೋಗುವವರೆಗೆ ಹುರಿದು ನಂತರ 1 ಚಮಚ ಖಾರಾ ಪುಡಿ, 1 ಚಮಚ ಆಮ್ ಚೂರ್ ಪುಡಿ, 1/2 ಚಮಚ ಗರಂ ಮಸಾಲಾ, ಉಪ್ಪು, ಹುರಿದ ಬೆಂಡೆಕಾಯಿ ಹಾಕಿ ಕಲೆಸಿ ಕಡಿಮೆ ಉರಿಯಲ್ಲಿ 5 ನಿಮಿಷ ತಟ್ಟೆ ಮುಚ್ಚದೆ
ಬೇಯಿಸಿದರೆ ರುಚಿಯಾದ ಬೇಸನ್ ಬೆಂಡಿ ಸಿದ್ಧ!

ಚಪಾತಿ, ಅನ್ನ ಸಾರಿನ ಜೊತೆ Side dish ಆಗಿ ತುಂಬಾ ಚೆನ್ನಾಗಿರುತ್ತದೆ!

ಧನ್ಯವಾದಗಳು