ಅವರೇ ಕಾಯಿ ಸೀಸನ್ ಪ್ರಾರಂಭವಾದರೆ ಎಲ್ಲೆಡೆ ಅವರೇ ರಾಶಿ! ರುಚಿ ರುಚಿಯಾದ ಎಷ್ಟೋ ಬಗೆಯ ಅಡುಗೆಗಳನ್ನು ಮಾಡಬಹುದು! ಅದರಲ್ಲಿ ಒಂದು ಅವರೇ ಕಾಳಿನ ಹುಸಲಿ! ಚಪಾತಿ, ಪೂರಿ, ದೋಸೆ, ಅಕ್ಕಿ ರೊಟ್ಟಿ ಜೊತೆ ತುಂಬಾ ಚೆನ್ನಾಗಿರುತ್ತದೆ.

ಮಾಡುವ ವಿಧಾನ: –

1 ಲೋಟ ಎಳೆಯದಾದ ಅವರೇ ಕಾಳನ್ನು 2 ವಿಷಲ್ ಕೂಗಿಸಿಡಿ.

   

2 ಟೇಬಲ್ ಚಮಚ ಬಿಳಿ ಎಳ್ಳು, 1/2 ಟೇಬಲ್ ಚಮಚ ಜೀರಿಗೆ ಹುರಿದು ಪುಡಿ ಮಾಡಿಡಿ.

4 ಚಮಚ ತೆಂಗಿನ ಕಾಯಿ ತುರಿದಿಡಿ.

   

ಬಾಣಲೆಯಲ್ಲಿ 2 ಚಮಚ ಬೆಣ್ಣೆ/ಎಣ್ಣೆ ಹಾಕಿ ಸಾಸಿವೆ, ಇಂಗು, ಕರಿಬೇವು, 4 ಹೆಚ್ಚಿದ ಹಸಿ ಮೆಣಸಿನ ಕಾಯಿ ಹಾಕಿ ಸ್ವಲ್ಪ ಹುರಿಯಿರಿ. ನಂತರ ಬೆಂದ ಅವರೇ ಕಾಳು, ಎಳ್ಳಿನ ಪುಡಿ, ಉಪ್ಪು, ಹೆಚ್ಚಿದ ಕೊತ್ತಂಬರಿ ಸೊಪ್ಪು, ಕಾಯಿ ತುರಿ, 1/2 ನಿಂಬೆ ರಸ, ಕಾಯಿ ತುರಿ ಹಾಕಿ ಕಲೆಸಿ ಕೊನೆಯಲ್ಲಿ 1 ಚಮಚ ಬೆಣ್ಣೆ ಹಾಕಿ ತಟ್ಟೆ ಮುಚ್ಚಿ ಕಡಿಮೆ ಉರಿಯಲ್ಲಿ 2 ನಿಮಿಷ ಬೇಯಿಸಿದರೆ ರುಚಿಯಾದ ಅವರೇ ಕಾಳು ಉಸಲಿ ರೆಡಿ!

ಧನ್ಯವಾದಗಳು.