ಸಿಹಿ ತಿನಿಸು ಎಂದರೆ ಎಲ್ಲರಿಗೂ ತುಂಬಾ ಇಷ್ಟ! ಆದರೆ ಮಧು ಮೇಹಿಗಳು ಸಿಹಿ ತಿನ್ನುವಂತೆ ಇಲ್ಲ! ಹಬ್ಬ ಎಂದ ಮೇಲೆ ಬಾಯಿ ಸಿಹಿ ಮಾಡದಿದ್ದರೆ ಹಬ್ಬ ಪೂರ್ಣವಾಗುವುದಿಲ್ಲ! ಅವರಿಗಾಗಿ ಕೇವಲ 10 ನಿಮಿಷದಲ್ಲಿ ಮಾಡಬಹುದಾದ ವಿಶೇಷ ಸಿಹಿ ರೆಸಿಪಿ ಇಲ್ಲಿದೆ!

ಮಾಡುವ ವಿಧಾನ :-

200 ಗ್ರಾಂ ಸಪ್ಪೆ ಖೋವಾ ಪುಡಿ ಮಾಡಿಡಿ. ಖೋವಾ Room temperature ನಲ್ಲಿ ಇರಬೇಕು. Fridge ನಿಂದ ಹೊರ ತೆಗೆದರೆ 1 ಗಂಟೆ ಸಮಯ ಹೊರಗಿಟ್ಟು ಮಾಡಿ.

      

1 ಚಮಚ ಬಿಸಿ ಹಾಲಿಗೆ ಚಿಟಿಕೆ ಕುಂಕುಮ ಕೇಸರಿ ಹಾಕಿಡಿ( ಬೇಕಾದರೆ ಹಾಕಿ, ಹಾಕದೆ ಕೂಡ ಮಾಡಬಹುದು. ಬೆಳ್ಳಗೆ ಇರುವ ಪೇಡಾ ಮಾಡಬಹುದು)

6 Sugar Free tablets ಪುಡಿ ಮಾಡಿಡಿ. ಇಷ್ಚು ಹಾಕಿದರೆ ಸಿಹಿ ಸರಿಯಾಗಿ ಇರುತ್ತದೆ ( Moderate) . ನಿಮ್ಮ ರುಚಿಗೆ ತಕ್ಕ ಹಾಗೆ Tablets ಹಾಕಿಕೊಳ್ಳಿ.

   

ಬಾಣಲೆಯಲ್ಲಿ 1/2 ಚಮಚ ತುಪ್ಪ, ಪುಡಿ ಮಾಡಿದ ಖೋವಾ ಹಾಕಿ Medium ಉರಿಯಲ್ಲಿ ಬಿಸಿ ಮಾಡಿ ‌ ಖೋವಾ ಕರಗಿದಾಗ 1 ಟೇಬಲ್ ಚಮಚ ಮೈದಾ, ಕುಂಕುಮ ಕೇಸರಿ ಹಾಕಿದ ಹಾಲು ಹಾಕಿ ಸ್ವಲ್ಪ ಬಾಡಿಸಿ. ಅದು ಗಟ್ಟಿಯಾದಾಗ ಪುಡಿ ಮಾಡಿದ Sugar free tablets ಹಾಕಿ ಕಲೆಸಿ ಮಿಶ್ರಣ ಒಂದೇ ಮುದ್ದೆಯಂತಾಗಾಗ ಒಲೆಯಿಂದ ಇಳಿಸಿ.

ಸ್ವಲ್ಪ ತುಪ್ಪ ಒಂದು ತಟ್ಟೆಗೆ ಸವರಿ ಮಿಶ್ರಣ ಹರಡಿ. ಸ್ವಲ್ಪ ಬೆಚ್ಚಗೆ ಆದಾಗ ನಿಮಗೆ ಬೇಕಾದ ಆಕಾರ ಅಥವಾ ಉಂಡೆ ಮಾಡಿ ಸವಿಯಿರಿ.

1 ಅಥವಾ 2 ದಿನ ಇಡಬಹುದು. ಈ ರೀತಿ ಮಾಡಿದ ಪೇಡಾಗಳನ್ನು ಡಯಟ್ ಮಾಡುವವರು, ದೊಡ್ಡವರು ತಿನ್ನಬಹುದು. ಮಕ್ಕಳಿಗೆ ಕೊಡಬೇಡಿ. Sugar Free tablets ಮಕ್ಕಳಿಗೆ ಒಳ್ಳೆಯದಲ್ಲ!

   

ಈ ಪೇಡಾ ಸಕ್ಕರೆ ಹಾಕುವ ಪೇಡಾದ ಹಾಗೆ ಹದಗೆಡುವ ಯೋಚನೆಯಿಲ್ಲ! ಮಕ್ಕಳ ಕೈಗೆ ಕೊಟ್ಟರೆ ಅವರೇ ಬೇಕಾದ ಆಕಾರ ಮಾಡಿ ಕೊಡುತ್ತಾರೆ!

ಧನ್ಯವಾದಗಳು.