ಆರೋಗ್ಯಕರ ಮತ್ತು ರುಚಿಕರವಾದ ರೆಸಿಪಿ!

ಮಾಡುವ ವಿಧಾನ:-

ತಲಾ 1 ಲೋಟ ಮೆಾಳಕೆ ಬಂದ ಹೆಸರು ಕಾಳು, ಕಡಲೆ ಕಾಳು, ಅಲಸಂದೆ, ಹುರುಳಿ ಕಾಳುಗಳು, 2 ಚಮಚ ಮೆಾಳಕೆ ಬಂದ ಮೆಂತ್ಯ, 1 ಲೋಟ ನೆನೆಸಿದ ಅಕ್ಕಿಯನ್ನು ನುಣ್ಣಗೆ ದೋಸೆ ಹಿಟ್ಟಿನ ಹದಕ್ಕೆ ರುಬ್ಬಿಕೊಳ್ಳಿ. ಹೆಚ್ಚಿಗೆ ನೀರು ಹಾಕಬೇಡಿ.

ನಂತರ 4 ಹೆಚ್ಚಿದ ಮೆಣಸಿನ ಕಾಯಿ, 1 ಈರುಳ್ಳಿ, ತುರಿದ 1/2 ಸೌತೇಕಾಯಿ, 1 ಇಂಚು ಶುಂಠಿ, 2 ಚಮಚ ಕಾಯಿತುರಿ, 1 ಕ್ಯಾರೆಟ್, ಹೆಚ್ಚಿದ ಕೊತ್ತಂಬರಿ, ಕರಿಬೇವು, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ, ಕಲೆಸಿ.

   

ಬಾಳೆ ಎಲೆಗಳನ್ನು ಚಿಕ್ಕದಾಗಿ ಕತ್ತರಿಸಿ, ಎರಡೂ ಕಡೆಯೂ ಚೆನ್ನಾಗಿ ತೊಳೆದು, ಕುಕ್ಕರ್ ಬಟ್ಟಲಿನಲ್ಲಿ ಇಟ್ಟು ಒಂದು ಬಾಳೆ ಎಲೆಗೆ ಹನಿ ಎಣ್ಣೆ ಸವರಿ ದೋಸೆಗಿಂತಲೂ ಸ್ವಲ್ಪ ದಪ್ಪನಾಗಿ ಸೌಟಿನಿಂದ ಅಡೈಯನ್ನು ಹೊಯ್ಯಿರಿ, ಅದರ ಮೇಲೆ ಇನ್ನೊಂದು ಬಾಳೆ ಎಲೆ ಇಟ್ಟು ಇನ್ನೊಂದು ದೋಸೆ, ಹೀಗೆ 6 ರಿಂದ 8 ದೋಸೆಗಳನ್ನು ಒಂದರ ಮೇಲೆ ಒಂದರಂತೆ ಜೋಡಿಸಿ. (ಬಾಳೆ ಎಲೆಗಳಿಗೆ ಎಣ್ಣೆ ಹಚ್ಚಿರುವುದರಿಂದ ಎಲೆಗಳು ಅಂಟಿಕೊಳ್ಳುವುದಿಲ್ಲ) 10ರಿಂದ 12 ನಿಮಿಷ ಇಡ್ಲಿಯಂತೆ ಕುಕ್ಕರಿನಲ್ಲಿ ಸ್ಟೀಮ್ ಮಾಡಿ. ನಂತರ ನಿಧಾನವಾಗಿ ಬಾಳೆ ಎಲೆಯಿಂದ ತೆಗೆದು, ಚಟ್ನಿ/ಮೊಸರಿನೊಂದಿಗೆ ಬಡಿಸಿ.

ಎಣ್ಣೆ ಇಲ್ಲದಿರುವುದರಿಂದ ಮಧು ಮೇಹಿಗಳಿಗೆ, ಡಯಟ್ ಮಾಡುವವರಿಗೆ ಆರೋಗ್ಯಕ್ಕೆ ಒಳ್ಳೆಯದು. ಬಾಳೆ ಎಲೆ ಸಿಗದಾಗ ಹೆಂಚಿನ ಮೇಲೆ ಸಾಮಾನ್ಯವಾಗಿ ದೋಸೆ ಮಾಡುವ ಹಾಗೆ ಮಾಡಬಹುದು!

ಹಬೆಯಲ್ಲಿ ಬೇಯಿಸುವುದೇ ಈ ದೋಸೆಯ ವಿಶೇಷ.

ಧನ್ಯವಾದಗಳು.