SIHI & KHARA PONGAL ಸಿಹಿ ಮತ್ತು ಖಾರಾ ಪೊಂಗಲ್

Categories: upaharaPublished On: November 28, 20170 Comments0.4 min read
Indu Jayaram
SHARE
ಪೊಂಗಲ್ ಜನಪ್ರಿಯ ಆಹಾರ! ಆರೋಗ್ಯಕರ ಕೂಡಾ!

ಸಿಹಿ ಪೊಂಗಲ್ ಮಾಡುವ ವಿಧಾನ:-

1/4 ಲೋಟ ಹೆಸರು ಬೇಳೆಯನ್ನು ಸ್ವಲ್ಪ ಹುರಿದು 1 ಲೋಟ ಅಕ್ಕಿಯೊಂದಿಗೆ 3 ಲೋಟ ನೀರು ಹಾಕಿ 3 ವಿಷಲ್ ಕೂಗಿಸಿಡಿ.

1 ಗಿಟುಕು ಒಣ ಕೊಬ್ಬರಿ ತುರಿದಿಡಿ.

   

1 ಲೋಟ ಬೆಲ್ಲ ಪುಡಿ ಮಾಡಿಡಿ. (ಸಿಹಿ ನಿಮ್ಮ ರುಚಿಗೆ ತಕ್ಕ ಹಾಗೆ).

ಬಾಣಲೆಯಲ್ಲಿ 5 ಚಮಚ ತುಪ್ಪ ಹಾಕಿ ಗೋಡಂಬಿ, ದ್ರಾಕ್ಷಿ, ಸ್ವಲ್ಪ ಕುಂಕುಮ ಕೇಸರಿ ಹುರಿದು ತೆಗೆದಿಡಿ.

ಅದೇ ಬಾಣಲೆಯಲ್ಲಿ ಬೆಲ್ಲ, ಸ್ವಲ್ಪ ನೀರು ಹಾಕಿ ಬೆಲ್ಲ ಕರಗಲು ಇಡಿ. ಬೆಲ್ಲ ಕರಗಿದ ಮೇಲೆ ಬೆಂದ ಅಕ್ಕಿ ಹೆಸರು ಬೇಳೆ ಮಿಶ್ರಣ, ತುರಿದ ಕೊಬ್ಬರಿ, ಏಲಕ್ಕಿ ಪುಡಿ, ಹುರಿದ ಗೋಡಂಬಿ, ದ್ರಾಕ್ಷಿ ಹಾಕಿ ಚೆನ್ನಾಗಿ ಕಲೆಸಿ ಕಡಿಮೆ ಉರಿಯಲ್ಲಿ ಸ್ವಲ್ಪ ಕುದಿಸಿದರೆ ಸಿಹಿ ಪೊಂಗಲ್ ಸಿದ್ಧ!

 

ಖಾರಾ ಪೊಂಗಲ್ ಮಾಡುವ ವಿಧಾನ:-

1/2 ಲೋಟ ಹೆಸರು ಬೇಳೆ ಹುರಿದು, 1 ಲೋಟ ಅಕ್ಕಿಯೊಂದಿಗೆ 4 ಲೋಟ ನೀರು ಹಾಕಿ 3 ವಿಷಲ್ ಕೂಗಿಸಿಡಿ.

1/2 ತೆಂಗಿನ ಕಾಯಿ ತುರಿದಿಡಿ.

   

1 ಚಮಚ ಕರಿ ಮೆಣಸು, 1 ಚಮಚ ಜೀರಿಗೆ ಹುರಿದು ತರಿ ತರಿಯಾಗಿ ಕುಟ್ಟಿಡಿ.

1/2 ಇಂಚು ಶುಂಠಿ ಸಿಪ್ಪೆ ತೆಗೆದು ಸಣ್ಣಗೆ ಹೆಚ್ಚಿಡಿ/ತುರಿದಿಡಿ.

ಬಾಣಲೆಯಲ್ಲಿ 4 ಚಮಚ ತುಪ್ಪ ಹಾಕಿ ಪುಡಿ ಮಾಡಿದ ಮೆಣಸು ಜೀರಿಗೆ, ಇಂಗು, ಶುಂಠಿ, ಬೆಂದ ಅಕ್ಕಿ ಹೆಸರು ಬೇಳೆ ಮಿಶ್ರಣ, ಉಪ್ಪು, ಹುರಿದ ಗೋಡಂಬಿ, ಕೊತ್ತಂಬರಿ ಸೊಪ್ಪು, ಕಾಯಿ ತುರಿ ಹಾಕಿ ಕಡಿಮೆ ಉರಿಯಲ್ಲಿ ಸ್ವಲ್ಪ ಬೇಯಿಸಿದರೆ ಖಾರಾ ಪೊಂಗಲ್ ರೆಡಿ!

ಅಕ್ಕಿ ಮತ್ತು ಹೆಸರು ಬೇಳೆ ಬೇಯಿಸುವಾಗ ನೀರಿನ ಬದಲು ಹಾಲು ಹಾಕಿ ಬೇಯಿಸಿದರೆ ಮಿಲ್ಕ್ ಪೊಂಗಲ್ ಮತ್ತಷ್ಟು ಚೆನ್ನಾಗಿರುತ್ತದೆ.

ಪೊಂಗಲ್ ಯಾವಾಗಲೂ ಚೆನ್ನಾಗಿ ಬೆಂದಿರಬೇಕು. ತುಪ್ಪ, ಕಾಯಿ ತುರಿ ಧಾರಾಳವಾಗಿ ಹಾಕಬೇಕು.. ಆಗಲೇ ಚೆನ್ನಾಗಿರುವುದು. ಖಾರಾ ಪೊಂಗಲ್ ಗೆ ಕಾಯಿ ತುರಿ, ಸಿಹಿ ಪೊಂಗಲ್ ಗೆ ಒಣ ಕೊಬ್ಬರಿ ಹಾಕಬೇಕು.

 

ಹುಣಿಸೆ ಗೊಜ್ಜು

1 ನಿಂಬೆ ಹಣ್ಣಿನ ಗಾತ್ರದ ಹುಣಿಸೆ ಹಣ್ಣಿನ ರಸ ತೆಗೆದಿಡಿ.

ಬಾಣಲೆಯಲ್ಲಿ 1 ಚಮಚ ಎಣ್ಣೆ ಹಾಕಿ ಸಾಸಿವೆ, ಇಂಗು, ಕರಿ ಬೇವು, ಹುಣಸೆ ರಸ, ಉಪ್ಪು, 1 ಚಮಚ ಸಾರಿನ ಪುಡಿ, ಚೂರು ಬೆಲ್ಲ ಹಾಕಿ ಕುದಿಸಿದರೆ ಹುಣಿಸೆ ಗೊಜ್ಜು ಸಿದ್ಧ!

ಧನ್ಯವಾದಗಳು.

About the Author: Indu Jayaram

Indu Jayaram is a homemaker and regularly writes on home cooked food. She has more than 10,000 followers in her facebook page https://www.facebook.com/pg/indumathijayaram/

Leave A Comment