ಶ್ರಾವಣ ಮಾಸದ ಮಂಗಳ ಗೌರಿಯ ನೈವೇದ್ಯಕ್ಕೆ ಮಾಡಬಹುದು.

ಮಾಡುವ ವಿಧಾನ:-

1 ಲೋಟ ಅಕ್ಕಿಯನ್ನು 30 ನಿಮಿಷಗಳ ಕಾಲ ನೆನೆಸಿ ಸೋರಿಹಾಕಿ. ಬಾಸುಮತಿ ಅಥವಾ ಸಾಧಾರಣ ಅಕ್ಕಿ ಯಾವುದಾದರೂ ಪರ್ವಾಗಿಲ್ಲ.

1 ಲೋಟ ಕಾಯಿ ತುರಿದಿಡಿ.

ಕುಕ್ಕರಿನಲ್ಲಿ 4 ಚಮಚ ತುಪ್ಪ ಹಾಕಿ 10 ಗೋಡಂಬಿ ಹುರಿದು ತೆಗೆದಿಡಿ. ಕಾಯಿಯನ್ನು ತೆಳ್ಳಗೆ Slice ಮಾಡಿ 8 ಚೂರುಗಳನ್ನು ತುಪ್ಪದಲ್ಲಿ ಹುರಿದಿಡಿ.

ಅದೇ ಕುಕ್ಕರಿನಲ್ಲಿ 4 ಲವಂಗ ಹಾಕಿ ಹುರಿದು ನೆಂದ ಅಕ್ಕಿ ಹಾಕಿ ಸ್ವಲ್ಪ ಹುರಿದು 2 ಲೋಟ ನೀರು ಹಾಕಿ ಮಧ್ಯಮ ಉರಿಯಲ್ಲಿ ಬೇಯಿಸಿ. ಆಗಾಗ ಕೈ ಆಡಿಸುತ್ತಿರಿ.

ಅಕ್ಕಿ 80% ಬೆಂದ ನಂತರ 1 ಲೋಟ ಸಕ್ಕರೆ ಅಥವಾ ಬೆಲ್ಲ, ಕಾಯಿ ತುರಿ, ಏಲಕ್ಕಿ ಪುಡಿ ಹಾಕಿ ಕಡಿಮೆ ಉರಿಯಲ್ಲಿ ಅಕ್ಕಿಯನ್ನು ಪೂರ್ಣವಾಗಿ ಬೇಯಿಸಿ, ಕೊನೆಯಲ್ಲಿ ಹುರಿದ ಗೋಡಂಬಿ, ಕಾಯಿ ಚೂರು ಹಾಕಿದರೆ ರುಚಿಯಾದ ಸಿಹಿ ಕಾಯನ್ನ ಸಿದ್ಧ!

ಧನ್ಯವಾದಗಳು.