ನಾಗರ ಚೌತಿ, ಪಂಚಮಿ ಹಬ್ಬದಲ್ಲಿ ಮಾಡುವ ಇನ್ನೊಂದು ಉಂಡೆ. ಅದ್ಭುತವಾದ ರುಚಿಯ ಉಂಡೆ!

ಮಾಡುವ ವಿಧಾನ:-

2 ಲೋಟ ಅಕ್ಕಿ, 1 ಲೋಟ ಹೆಸರು ಬೇಳೆ, 1 ಲೋಟ ಕಡಲೇ ಬೇಳೆಯನ್ನು ಸಣ್ಣ ಉರಿಯಲ್ಲಿ ಕೆಂಪಗೆ ಹುರಿದು ನುಣ್ಣಗೆ ಪುಡಿ ಮಾಡಿ ಜರಡಿ ಹಿಡಿದಿಡಿ.

1 ಗಿಟುಕು ಕೊಬ್ಬರಿಯನ್ನು ಚಿಕ್ಕ ಚಿಕ್ಕದಾಗಿ ಹೆಚ್ಚಿಡಿ/ತುರಿದಿಡಿ.

1/2 ಲೋಟ ಕಡಲೇ ಬೀಜ ಹುರಿದು ಸಿಪ್ಪೆ ತೆಗೆದಿಡಿ.

1/2 ಲೋಟ ಹುರಿಗಡಲೆಯನ್ನು ಆರಿಸಿಡಿ.

2 ಲೋಟ ಬೆಲ್ಲವನ್ನು ಸಣ್ಣಗೆ ಹೆಚ್ಚಿಡಿ.

5 ಚಮಚ ಬಿಳಿ ಎಳ್ಳು ಹುರಿದಿಡಿ.

4 ಏಲಕ್ಕಿ ಪುಡಿ ಮಾಡಿಡಿ.

   

ಬಾಣಲೆಯಲ್ಲಿ ಬೆಲ್ಲಕ್ಕೆ 1/2 ಲೋಟ ನೀರು ಹಾಕಿ ಕುದಿಯಲು ಇಡಿ. ಒಂದೆಳೆ ಪಾಕ ಬಂದ ತಕ್ಷಣ ಒಲೆಯಿಂದ ಇಳಿಸಿ, ಮಿಕ್ಕ ಎಲ್ಲಾ ಸಾಮಾನುಗಳನ್ನು ಹಾಕಿ ಕಲೆಸಿ ಸ್ವಲ್ಪ ಬೆಚ್ಚಗಾದ ಮೇಲೆ ಕೈಗೆ ಸ್ವಲ್ಪ ತುಪ್ಪ ಸವರಿ ಉಂಡೆ ಮಾಡಿಡಿ.

ಬೆಲ್ಲ ಇಷ್ಚು ಬೇಕು, ಬೇಕಿದ್ದರೆ 1/4 ಲೋಟ ಬೆಲ್ಲ ಹೆಚ್ಚು ಹಾಕಿ, ಕಡಿಮೆ ಮಾಡಬೇಡಿ.

   

ಈ ಉಂಡೆಯನ್ನು ಮದುವೆಗಳಲ್ಲಿ ಹೆಚ್ಚು ಮಾಡುತ್ತಾರೆ.

ಧನ್ಯವಾದಗಳು.