ಚಕ್ಕುಲಿ ಎಲ್ಲರೂ ಇಷ್ಟ ಪಟ್ಟು ತಿನ್ನುವ ಕರಿದ ತಿಂಡಿ! ದೊಡ್ಡವರು, ಮಕ್ಕಳು ಎಲ್ಲರಿಗೂ ಇಷ್ಟ. ಅದನ್ನು ಆರೋಗ್ಯಕರವಾಗಿ, ರುಚಿಯಾಗಿ ಮಾಡುವ ರೆಸಿಪಿ ಇಲ್ಲಿದೆ!

   

2 ಕಟ್ಟು ಪಾಲಾಕ್ ಸೊಪ್ಪು ತೊಳೆದು 4 ಅಥವಾ 5 ಹಸಿ ಮೆಣಸಿನ ಕಾಯಿ (ಖಾರಾ ನಿಮಗೆ ರುಚಿಗೆ ತಕ್ಕಷ್ಟು) ಜೊತೆ ಸ್ವಲ್ಪ ನೀರು (ಕೆಲವು ಚಮಚ ನೀರು) ಸೇರಿಸಿ ನುಣ್ಣಗೆ ರುಬ್ಬಿ.

   

1 ಅಳತೆ ಅಕ್ಕಿ ಹಿಟ್ಟು, 1/2 ಅಳತೆ ಹುರಿಗಡಲೆ ಪುಡಿ ( ಪುಡಿ ಮಾಡಿ ಅಳತೆ ಮಾಡಿ), 1 ಚಮಚ ಜೀರಿಗೆ, 2 ಚಮಚ ಬಿಳಿ ಎಳ್ಳು, 1/2 ಚಮಚ ಇಂಗು, ಉಪ್ಪು, 1 ಚಮಚ ಬೆಣ್ಣೆ ಹಾಕಿ ಚೆನ್ನಾಗಿ ಕಲೆಸಿ, ರುಬ್ಬಿದ ಪಾಲಾಕ್ ಮಿಶ್ರಣ ಹಾಕಿ ಚಕ್ಕುಲಿ ಹಿಟ್ಟಿನ ಹದಕ್ಕೆ ಕಲೆಸಿ. ಬೇಕಿದ್ದರೆ ಸ್ವಲ್ಪ ನೀರು ಸೇರಿಸಿ.

ಚಕ್ಕುಲಿ ಒರಳಿಗೆ ಸುತ್ತಲೂ ಎಣ್ಣೆ ಸವರಿ ಚಕ್ಕುಲಿ ಹಿಟ್ಟು ತುಂಬಿ ಪ್ಲಾಸ್ಚಿಕ್ ಪೇಪರ್/ಬಟರ್ ಪೇಪರ್ ಮೇಲೆ ಗುಂಡಗೆ ಒತ್ತಿ ತುದಿಗಳನ್ನು ಸ್ವಲ್ಪ ಅಂಟಿಸಿ ಕಾದ ಎಣ್ಣೆಯಲ್ಲಿ ಹಾಕಿ ಕಡಿಮೆ ಉರಿಯಲ್ಲಿ ಗರಿ ಗರಿಯಾಗಿ ಕರಿದು ಹೆಚ್ಚಿನ ಎಣ್ಣೆ ತೆಗೆದು ಸವಿಯಿರಿ.

ಬಹಳ ಸುಲಭವಾಗಿ, ರುಚಿಯಾಗಿ ಮಾಡಬಹುದು! ಪಾಲಾಕ್ ಹಾಕಿರುವುದರಿಂದ ಆರೋಗ್ಯಕರ ಕೂಡಾ!

ಧನ್ಯವಾದಗಳು.