PALAK ALOO ಪಾಲಾಕ್ ಆಲೂ
ಮಾಡುವ ವಿಧಾನ:-
4 ಕಟ್ಟು ಪಾಲಾಕ್ ಸೊಪ್ಪು ಬಿಡಿಸಿ ತೊಳೆದು 2 ಹಸಿ ಮೆಣಸಿನ ಕಾಯಿ ಜೊತೆ ತೆರೆದ ಬಾಣಲೆಯಲ್ಲಿ 5 ನಿಮಿಷ ಬೇಯಿಸಿ ತಣ್ಣಗಾದ ಮೇಲೆ ನುಣ್ಣಗೆ ರುಬ್ಬಿಡಿ.
1 ಈರುಳ್ಳಿ, 2 ಟೊಮೇಟೋ ಸಣ್ಣಗೆ ಹೆಚ್ಚಿಡಿ.
1 ಆಲೂಗೆಡ್ಡೆ ಸಿಪ್ಪೆ ತೆಗೆದು ದೊಡ್ಡ ದೊಡ್ಡದಾಗಿ ಹೆಚ್ಚಿ ಬೇಯಿಸಿಡಿ.
ಬಾಣಲೆಯಲ್ಲಿ 3 ಚಮಚ ಎಣ್ಣೆ ಹಾಕಿ ಜೀರಿಗೆ, ಹೆಚ್ಚಿದ ಈರುಳ್ಳಿ, ಟೊಮೇಟೋ ಹಾಕಿ ಹುರಿದು, 1/2 ಚಮಚ ಖಾರಾ ಪುಡಿ (ಹಸಿ ಮೆಣಸಿನ ಕಾಯಿ ಬೇಯಲು ಹಾಕಿದೆ), 1/2 ಚಮಚ ಗರಂ ಮಸಾಲ, ಚೂರು ಕಸ್ತೂರಿ ಮೇಥಿ, ಉಪ್ಪು ಹಾಕಿ ಬಾಡಿಸಿ ರುಬ್ಬಿದ ಪಾಲಾಕ್ ಮಿಶ್ರಣ, ಬೆಂದ ಆಲೂಗೆಡ್ಡೆ ಹಾಕಿ ಕಲೆಸಿ ಕಡಿಮೆ ಉರಿಯಲ್ಲಿ ಮೂರರಿಂದ ನಾಲ್ಕು ನಿಮಿಷ ಬೇಯಿಸಿ ಕೊನೆಯಲ್ಲಿ 2 ಚಮಚ ಫ್ರೆಶ್ ಕ್ರೀಂ ಹಾಕಿದರೆ ರುಚಿಯಾದ ಪಾಲಾಕ್ ಆಲೂ ಸಿದ್ಧ!
ಬದಲಾವಣೆಗೆ ಆಲೂ ಬದಲು ಪನ್ನೀರ್ ಸ್ವಲ್ಪ ಹುರಿದು ಹಾಕಿಕೊಳ್ಳಬಹುದು.
ಧನ್ಯವಾದಗಳು.