ಬಹಳ ಹಳೆಯ, ಆರೋಗ್ಯಕರ ರೆಸಿಪಿ.

ಮಾಡುವ ವಿಧಾನ:-

1 ಲೋಟ (ಪಾವು) ಕಡಲೇ ಬೇಳೆ 2 ಗಂಟೆ ನೆನೆಸಿಡಿ. ಬೇಕಾದರೆ 1/2 ಭಾಗ ಕಡಲೇ ಬೇಳೆ 1/2 ಭಾಗ ತೊಗರಿ ಬೇಳೆ ಹಾಕಿಕೊಳ್ಳಬಹುದು. ನೆಂದ ಬೇಳೆಯನ್ನು ನೀರು ಸೋರಿ ಹಾಕಿ ತರಿ ತರಿಯಾಗಿ ರುಬ್ಬಿಡಿ.

4 ಹಸಿ ಮೆಣಸಿನ ಕಾಯಿ ಸಣ್ಣಗೆ ಹೆಚ್ಚಿಡಿ ‌ ಕೊತ್ತಂಬರಿ ಸೊಪ್ಪು, ಸ್ವಲ್ಪ ಪುದೀನಾ ಹೆಚ್ಚಿಡಿ.

   

1 ಇಂಚು ಶುಂಠಿ ಸಿಪ್ಪೆ ತೆಗೆದು ತುರಿದಿಡಿ.(ಬೇಕಾದರೆ)

4 ಚಮಚ ಕಾಯಿ ತುರಿದಿಡಿ.

ರುಬ್ಬಿದ ಬೇಳೆ ಮಿಶ್ರಣಕ್ಕೆ, ಹಸಿ ಮೆಣಸಿನ ಕಾಯಿ, ಸೊಪ್ಪು, ಕಾಯಿ ತುರಿ, ಉಪ್ಪು, ಚಿಟಿಕೆ ಇಂಗು ಹಾಕಿ ಕಲೆಸಿ ಎರಡು ಕುಕ್ಕರ್ ಬಟ್ಟಲಿನಲ್ಲಿ ಹರಡಿ 5 ನಿಮಿಷ ಹಬೆಯಲ್ಲಿ ಬೇಯಿಸಿ.

   

ನಂತರ ಬೆಂದ ಬೇಳೆ ಮಿಶ್ರಣ ಸ್ವಲ್ಪ ಬೆಚ್ಚಗೆ ಆದಾಗ ಕೈಯಿಂದ ಪುಡಿ ಮಾಡಿ 1 ಚಮಚ ತುಪ್ಪ ಹಾಕಿ ಕಲೆಸಿ ಪುಟ್ಟ ಪುಟ್ಟ ಉಂಡೆ ಮಾಡಿ ಬಟ್ಟಲಿನಲ್ಲಿ ಜೋಡಿಸಿ ಮತ್ತೆ 8 ನಿಮಿಷ ಹಬೆಯಲ್ಲಿ ಬೇಯಿಸಿದರೆ ರುಚಿಯಾದ, ಆರೋಗ್ಯಕರವಾದ ನುಚ್ಚಿನುಂಡೆ ಸಿದ್ಧ!

ಹೀಗೆ ಎರಡು ಬಾರಿ ಬೇಯಿಸಿದರೆ ಉಂಡೆಗಳು ಬೆರಳಿನಲ್ಲಿ ಒತ್ತಿದರೆ ಒಡೆಯುವಷ್ಟು ಮೃದುವಾಗಿರುತ್ತವೆ!

ಧನ್ಯವಾದಗಳು.