MOHAN THAAL ಮೋಹನ್ ತಾಲ್
ಮಾಡುವ ವಿಧಾನ:-
1 ಬಟ್ಟಲು ಕಡಲೇ ಹಿಟ್ಟಿಗೆ, 1 ಚಮಚ ತುಪ್ಪ, 1 ಚಮಚ ಹಾಲು ಹಾಕಿ ಉದುರು ಉದುರಾಗಿ ಕಲೆಸಿ, ಜರಡಿ ಹಿಡಿಯಿರಿ. ಬಾಣಲೆಯಲ್ಲಿ 1/2 ಬಟ್ಟಲು ತುಪ್ಪ ಬಿಸಿ ಮಾಡಿ, ಜರಡಿ ಹಿಡಿದ ಕಡಲೇ ಹಿಟ್ಟನ್ನು ಹಾಕಿ ಕಡಿಮೆ ಉರಿಯಲ್ಲಿ, ಘಮ್ಮನೆ ವಾಸನೆ ಬರುವವರೆಗೆ ಹುರಿಯಿರಿ (ಚಿನ್ನದ ಬಣ್ಣ ಬರುವವರೆಗೆ). ಇನ್ನೊಂದು ಬಾಣಲೆಯಲ್ಲಿ, 1/2 ಬಟ್ಟಲು ಸಕ್ಕರೆ, ಸ್ವಲ್ಪ ನೀರು ಹಾಕಿ, ಎರಡು ಎಳೆ ಪಾಕ ಮಾಡಿ ಕೊಂಡು, ಏಲಕ್ಕಿ ಪುಡಿ, ಕುಂಕುಮ ಕೇಸರಿ ಸೇರಿಸಿ, ಒಲೆಯಿಂದ ಕೆಳಗಿಳಿಸಿ, ಹುರಿದ ಕಡಲೇ ಹಿಟ್ಟು ಹಾಕಿ, ಚೆನ್ನಾಗಿ ಕಲೆಸುತ್ತಿರಿ, ಬಾಣಲೆಯ ಬಿಸಿಗೆ, ಮಿಶ್ರಣ ಗಟ್ಟಿಯಾಗಿ ಉಂಡೆಯಂತೆ ಆಗುತ್ತದೆ.
ತುಪ್ಪ ಸವರಿದ ತಟ್ಟೆಗೆ ಹಾಕಿ, ಮೇಲೆ ಸಣ್ಣದಾಗಿ ಹೆಚ್ಚಿದ ಗೋಡಂಬಿ, ಬಾದಾಮಿ ಹಾಕಿ ತಣ್ಣಗಾದ ಮೇಲೆ ತುಂಡು ಮಾಡಿರಿ, ಮೈಸೂರು ಪಾಕಿಗಿಂತ ತುಪ್ಪ ಕಡಿಮೆ ಹಿಡಿಯುವ ಈ ಸಿಹಿಯನ್ನೊಮ್ಮೆ ಮಾಡಿ ತಿಂದು ನೋಡಿ.
ಧನ್ಯವಾದಗಳು.