ಎಲ್ಲರೂ ಇಷ್ಟ ಪಡುವ ಕುರು ಕುರು ತಿಂಡಿ!

ಮಾಡುವ ವಿಧಾನ:-

1/2 ತೆಂಗಿನ ಕಾಯಿ ತುರಿದು 10 ರಿಂದ 12 ಹುರಿದ ಒಣ ಮೆಣಸಿನ ಕಾಯಿಯೊಂದಿಗೆ ಸ್ವಲ್ಪ ನೀರು ಸೇರಿಸಿ ನುಣ್ಣಗೆ ರುಬ್ಬಿ. (ನಿಮಗೆ ಖಾರಾ ಬೇಕಾದಷ್ಟು)

      

1/2 ಅಳತೆ ಕಡಲೇ ಬೀಜ ಹುರಿದು ಸಿಪ್ಪೆ ತೆಗೆದು, 1/2 ಅಳತೆ ಹುರಿಗಡಲೆ ಜೊತೆ ನುಣ್ಣಗೆ ಪುಡಿ ಮಾಡಿಡಿ.

   

3 ಅಳತೆ ಅಕ್ಕಿ ಹಿಟ್ಟಿಗೆ 2 ಚಮಚ ಕಾದ ಎಣ್ಣೆ, ರುಬ್ಬಿದ ಕಾಯಿ ಮಿಶ್ರಣ, 1/2 ಚಮಚ ಇಂಗು, 1 ಚಮಚ ಜೀರಿಗೆ, 1 ಚಮಚ ಬಿಳಿ ಎಳ್ಳು (ಬೇಕಾದರೆ), ಉಪ್ಪು, 1/2 ಅಳತೆ ಮೈದಾ, ಕಡಲೇ ಮಿಶ್ರಣ ಹಾಕಿ ಚೆನ್ನಾಗಿ ಕಲೆಸಿ ಗಟ್ಟಿಯಾಗಿ ಕಲೆಸಿ. ಬೇಕಾದರೆ ಸ್ವಲ್ಪ ನೀರು ಸೇರಿಸಿ. ಆದಷ್ಟೂ ಗಟ್ಟಿಯಾಗಿ ಕಲೆಸಿ ಚೆನ್ನಾಗಿ ನಾದಿ ಉದ್ದಕ್ಕೆ ಕಡ್ಡಿಯ ಹಾಗೆ ಮಾಡಿ ಗುಂಡಗೆ ಸುತ್ತಿ ಅಂಚುಗಳನ್ನು ಸೇರಿಸಿ ಒತ್ತಿ ಕಾದ ಎಣ್ಣೆಯಲ್ಲಿ ಹಾಕಿ ಕಡಿಮೆ ಉರಿಯಲ್ಲಿ ಕೆಂಪಗೆ ಕರಿದರೆ ರುಚಿಯಾದ ಕೋಡುಬಳೆ ಸಿದ್ಧ!

ಧನ್ಯವಾದಗಳು