KAJU MASALA & KERALA PARATHA ಕಾಜೂ ಮಸಾಲಾ ಮತ್ತು ಕೇರಳ ಪರಾಟ
ಮಾಡುವ ವಿಧಾನ:-
100 ಗ್ರಾಂ ಗೋಡಂಬಿಯನ್ನು ಸ್ವಲ್ಪ ತುಪ್ಪ ಹಾಕಿ ಹುರಿದಿಡಿ.
1 ಈರುಳ್ಳಿ, 2 ಟೂಮೇಟೋ ಸಣ್ಣಗೆ ಹೆಚ್ಚಿ 1 ಚಮಚ ಬೆಣ್ಣೆ, 1 ಇಂಚು ಚಕ್ಕೆ, 3 ಲವಂಗ, 1 ಇಂಚು ಸಿಪ್ಪೆ ತೆಗೆದ ಶುಂಠಿ, 5 ಎಸಳು ಬೆಳ್ಳುಳ್ಳಿ ಹಾಕಿ ಸ್ವಲ್ಪ ಹುರಿದು ತಣ್ಣಗಾದ ಮೇಲೆ ನುಣ್ಣಗೆ ರುಬ್ಬಿಡಿ.
ಬಾಣಲೆಯಲ್ಲಿ 2 ಚಮಚ ಬೆಣ್ಣೆ ಹಾಕಿ, 1/4 ಚಮಚ ಜೀರಿಗೆ ಹಾಕಿ, ರುಬ್ಬಿದ ಮಿಶ್ರಣ, ಚಿಟಿಕೆ ಅರಿಶಿಣ, 1/2 ಚಮಚ ಧನಿಯಾ ಪೂಡಿ, 1 ಚಮಚ ಖಾರಾ ಪುಡಿ, ಉಪ್ಪು ಹಾಕಿ ಕುದಿಸಿ, ಹುರಿದ ಗೋಡಂಬಿ ಹಾಕಿ ಕಡಿಮೆ ಉರಿಯಲ್ಲಿ 4 ರಿಂದ 5 ನಿಮಿಷ ಕುದಿಸಿ, ಕೊನೆಯಲ್ಲಿ ಹೆಚ್ಚಿದ ಕೊತ್ತಂಬರಿ ಸೊಪ್ಪು, ಸ್ವಲ್ಪ ಕಸ್ತೂರಿ ಮೇಥಿ ಹಾಕಿದರೆ ರುಚಿಯಾದ ಕಾಜೂ ಮಸಾಲಾ ರೆಡಿ.
ಕೇರಳ ಪರೋಟ ಮಾಡುವ ವಿಧಾನ:-
ಮೈದಾ ಹಿಟ್ಟಿಗೆ ಸ್ವಲ್ಪ ಸಕ್ಕರೆ, ಉಪ್ಪು, 1 ಚಮಚ ಎಣ್ಣೆ ಹಾಕಿ ಚೆನ್ನಾಗಿ ಕಲೆಸಿ ಸ್ವಲ್ಪ ನೀರು ಸೇರಿಸಿ ಮೆತ್ತಗೆ ಹಿಟ್ಟು ಕಲೆಸಿ ಚೆನ್ನಾಗಿ ನಾದಿ ಸ್ವಲ್ಪ ಎಣ್ಣೆ ಸವರಿ 1 ಗಂಟೆ ನೆನೆಸಿಡಿ.
ಚಪಾತಿ ಉಂಡೆಗಿಂತ ಸ್ವಲ್ಪ ದೊಡ್ಡ ಉಂಡೆ ತೆಗೆದು ಕೊಂಡು ತೆಳ್ಳಗೆ ಲಟ್ಟಿಸಿ, 1 ಚಮಚ ಎಣ್ಣೆ ಹಾಕಿ ಸವರಿ ಚಿಕ್ಕ ಚಿಕ್ಕದಾಗಿ ನೆರಿಗೆಯಂತೆ ಮಡಚಿ ಸ್ವಲ್ಪ ಉದ್ದಕೆ ಎಳೆಗು ಗುಂಡಗೆ ಸುತ್ತಿ ಲಟ್ಟಿಸಿ ಕಾದ ಕಾವಲಿ ಮೇಲೆ ಹಾಕಿ ಎರಡೂ ಕಡೆ ಸ್ವಲ್ಪ ಎಣ್ಣೆ ಹಾಕಿ ಕೆಂಪಗೆ ಬೇಯಿಸಿ. ನಂತರ ಸ್ವಲ್ಪ ಮುದುರಿ ತಿನ್ನಲು ಕೊಡಿ.
ಧನ್ಯವಾದಗಳು.