ನಾಗರ ಪಂಚಮಿಯಲ್ಲಿ ತಪ್ಪದೆ ಮಾಡುವ ಉಂಡೆ. ಸಾಧಾರಣವಾಗಿ ಕಡಲೇ ಬೀಜದ ಉಂಡೆಯನ್ನು ಬೆಲ್ಲದ ಪಾಕ ತೆಗೆದು ಮಾಡುತ್ತಾರೆ. ಈ ರೆಸಿಪಿ ಬಹಳ ಸುಲಭ!

ಮಾಡುವ ವಿಧಾನ:-

1 ಲೋಟ ಬೆಲ್ಲ ಪುಡಿ ಮಾಡಿಡಿ.

1 ಲೊಟ ಕಡಲೇ ಬೀಜ ಹುರಿದು ಸಿಪ್ಪೆ ತೆಗೆದು ತರಿ ತರಿಯಾಗಿ ಪುಡಿ ಮಾಡಿ.

   

ನಂತರ ಬೆಲ್ಲದ ಪುಡಿ ಸೇರಿಸಿ ಮತ್ತೊಮ್ಮೆ Mixie ಯಲ್ಲಿ 2 ಸುತ್ತು ಸುತ್ತಿ ತೆಗೆದು ಕಲೆಸಿ ಉಂಡೆ ಮಾಡಿಡಿ.

ಹೀಗೆ ಪುಡಿ ಮಾಡಿ ಉಂಡೆ ಮಾಡಿದರೆ ಸುಲಭವಾಗಿ ಮಾಡಬಹುದು, ಅಲ್ಲದೆ ವಯಸ್ಸಾದವರು ಕೂಡಾ ಈ ಉಂಡೆಯ ರುಚಿ ನೋಡಬಹುದು!

ಧನ್ಯವಾದಗಳು.