ನಿಂಬೆ ಚಿತ್ರಾನ್ನ, ಈರುಳ್ಳಿ ಚಿತ್ರಾನ್ನ, ಕಾಯಿ ಚಿತ್ರಾನ್ನ ತಿಂದು ಬೇಸರವಾಗಿದ್ದರೆ ಬದಲಾವಣೆಗೆ ಈ ಹುಣಿಸೆ ಚಿತ್ರಾನ್ನ ಮಾಡಿ ನೋಡಿ! ರುಚಿ ತುಂಬಾ ಚೆನ್ನಾಗಿರುತ್ತದೆ!

ಮಾಡುವ ವಿಧಾನ:-

1 ಪಾವು ಅಕ್ಕಿ ತೊಳೆದು ಅನ್ನ ಮಾಡಿ ತಟ್ಟೆಯಲ್ಲಿ ಹರಡಿಡಿ.

   

1 ನಿಂಬೆ ಹಣ್ಣಿನ ಗಾತ್ರದ ಹುಣಿಸೆ ಹಣ್ಣು ತೊಳೆದು ಬಿಸಿ ನೀರಲ್ಲಿ ನೆನೆಸಿ ರಸ ತೆಗೆದು 1 ತುಂಡು ಬೆಲ್ಲ ಹಾಕಿ ನೆನೆಸಿಡಿ.

      

ಬಾಣಲೆಯಲ್ಲಿ 2 ಚಮಚ ಎಣ್ಣೆ ಹಾಕಿ 1 ಹಿಡಿ ಕಡಲೇ ಬೀಜ ಕರಿದು ತೆಗೆದಿಡಿ. ಅದೇ ಎಣ್ಣೆಗೆ ಸಾಸಿವೆ, ಜೀರಿಗೆ, ಕಡಲೇ ಬೇಳೆ, ಉದ್ದಿನ ಬೇಳೆ. ಕರಿಬೇವು ಹಾಕಿ ಒಗ್ಗರಣೆ ಮಾಡಿ ತೆಗೆದಿಡಿ.

ಮತ್ತೊಂದು ಬಾಣಲೆಯಲ್ಲಿ 3 ಚಮಚ ಎಣ್ಣೆ ಹಾಕಿ ಹೆಚ್ಚಿದ 2 ಒಣ ಮೆಣಸಿನ ಕಾಯಿ, 4 ಉದ್ದಕ್ಕೆ ಸೀಳಿದ ಹಸಿ ಮೆಣಸಿನ ಕಾಯಿ, ಅರಿಶಿಣ, ಚಿಟಿಕೆ ಇಂಗು, ಹುಣಿಸೆ ರಸ, ಉಪ್ಪು ಹಾಕಿ ಸ್ವಲ್ಪ ಕುದಿಸಿ ಗೊಜ್ಜು ಗಟ್ಟಿಯಾಗಿ ಆಗುವವರೆಗೆ ಕುದಿಸಿ ಅನ್ನ, ಒಗ್ಗರಣೆ, ಕರಿದ ಕಡಲೇ ಬೀಜ, ಕೊತ್ತಂಬರಿ ಸೊಪ್ಪು ಹಾಕಿ ಕಲೆಸಿ ಸ್ವಲ್ಪ ಬಿಸಿ ಮಾಡಿದರೆ ರುಚಿಯಾದ ಹುಣಿಸೆ ಚಿತ್ರಾನ್ನ ಸಿದ್ಧ!

ಧನ್ಯವಾದಗಳು.