ವಡೆ ಎಲ್ಲರ Favourite ತಿಂಡಿ! ಅದರ ಗರಿ ಗರಿ ರುಚಿಗೆ ಮನ ಸೋಲದವರಿಲ್ಲ! ಅದರಲ್ಲೂ ಹಸಿ ಬಟಾಣಿ ವಡೆ! ಮತ್ತಷ್ಟು ಗರಿ ಗರಿ!

ಮಾಡುವ ವಿಧಾನ:-

1 ಲೋಟ ಹಸಿ ಬಟಾಣಿ ತೊಳೆದು ನೀರು ಸೋರಿ ಹಾಕಿ ತರಿ ತರಿಯಾಗಿ ರುಬ್ಬಿಡಿ. ನೀರು ಸೇರಿಸದೆ ರುಬ್ಬಿ.

1 ಈರುಳ್ಳಿ, 8 ಹಸಿ ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ಕರಿ ಬೇವು ಸಣ್ಣಗೆ ಹೆಚ್ಚಿಡಿ.

   

 

ರುಬ್ಬಿದ ಬಟಾಣಿ ಮಿಶ್ರಕ್ಕೆ ಹೆಚ್ಚಿದ ಈರುಳ್ಳಿ, ಸೊಪ್ಪು, ಮೆಣಸಿನ ಕಾಯಿ, 2 ಟೇಬಲ್ ಚಮಚ ಅಕ್ಕಿ ಹಿಟ್ಟು, 2 ಚಮಚ ಚಿರೋಟಿ ರವೆ, ಉಪ್ಪು ಹಾಕಿ ಗಟ್ಟಿಯಾಗಿ ಕಲೆಸಿ ಚಿಕ್ಕ ಚಿಕ್ಕ ಉಂಡೆ ಮಾಡಿ ತೆಳ್ಳಗೆ ವೀಳೆದೆಲೆ ಅಥವಾ ಬಟರ್ ಪೇಪರ್ ಮೇಲೆ ತೆಳ್ಳಗೆ ತಟ್ಟಿ ಕಾದ ಎಣ್ಣೆಯಲ್ಲಿ ಗರಿ ಗರಿಯಾಗಿ ಕರಿಯಿರಿ.

   

ಈ ವಡೆಗೆ ಸ್ವಲ್ಪ ಉಪ್ಪ ಮತ್ತು ಖಾರಾ ಹೆಚ್ಚು ಬೇಕಾಗುತ್ತದೆ, ತುಂಬಾ ರುಚಿಯಾಗಿ, ತುಂಬಾ ಗರಿ ಗರಿಯಾಗಿ ಇರುತ್ತದೆ.

ಧನ್ಯವಾದಗಳು.