HAALU HOLIGE & BELE KHARA HOLIGE ಹಾಲು ಹೋಳಿಗೆ ಮತ್ತು ಬೇಳೆ ಖಾರಾ ಹೋಳಿಗೆ
ಹಾಲು ಹೋಳಿಗೆ ಮಾಡುವ ವಿಧಾನ :-
1 ಬಟ್ಟಲು ಮೈದಾ, 1 ಬಟ್ಟಲು ಚಿರೋಟಿ ರವೆಗೆ, ಚಿಟಿಕೆ ಅರಿಷಿಣ, ಚಿಟಿಕೆ ಉಪ್ಪು, 2 ಚಮಚ ಕಾದ ಎಣ್ಣೆ, ನೀರು ಸೇರಿಸಿ ಗಟ್ಟಿಯಾಗಿ ಪೂರಿ ಹಿಟ್ಟು ಕಲೆಸಿ 10 ನಿಮಿಷ ಮುಚ್ಚಿಡಿ.
4 ಚಮಚ ಗಸಗಸೆ, 6 ಬಾದಾಮಿಯನ್ನು ಬಿಸಿ ನೀರಲ್ಲಿ ನೆನೆಸಿ, ರುಣ್ಣಗೆ ರುಬ್ಬಿ, ಸ್ವಲ್ಪ ನೀರು, 4 ಚಮಚ ಕಾಯಿ ತುರಿಯನ್ನು ಸೇರಿಸಿ ಮತ್ತಷ್ಟು ನುಣ್ಣಗೆ ರುಬ್ಬಿ.
ಬಾಣಲೆಯಲ್ಲಿ ತುರಿದ ಬೆಲ್ಲಕ್ಕೆ ಸ್ವಲ್ಪ ನೀರು ಸೇರಿಸಿ ಕುದಿಸಿ ಸೋಸಿಕೊಂಡು, ರುಬ್ಬಿದ ಮಿಶ್ರಣ ಸೇರಿಸಿ, ಬಿಸಿ ಮಾಡಿಕೊಳ್ಳಿ, ಕೊನೆಯಲ್ಲಿ ಏಲಕ್ಕಿ ಪುಡಿ, ಸ್ವಲ್ಪ ಹಾಲು ಸೇರಿಸಿ ಕಾಯಿ ಹಾಲು ಮಾಡಿ ಕೊಳ್ಳಿ.
ಕಲಸಿಟ್ಟ ಮೈದಾ ಮಿಶ್ರಣದಿಂದ ಚಿಕ್ಕ ಚಿಕ್ಕ ಉಂಡೆಗಳನ್ನು ಮಾಡಿ, ತೆಳ್ಳಗೆ ಪೂರಿ ಲಟ್ಟಿಸಿ, ಅಲ್ಲಲ್ಲಿ ಫೋರ್ಕ್ ನಿಂದ ಚುಚ್ಚಿ ಕಾದ ಎಣ್ಣೆಯಲ್ಲಿ, ಕೆಂಪಾಗಿ ಗರಿಗರಿಯಾಗಿ ಕರಿಯಿರಿ. ಪೂರಿ ಉಬ್ಬದಂತೆ ಹಪ್ಪಳದ ಹಾಗೆ ಗರಿ ಗರಿಯಾಗಿ ಇರುವಂತೆ ಕರಿದು ಡಬ್ಬದಲ್ಲಿ ಹಾಕಿಡಿ. (ಇದನ್ನು ಬೇಕಾದರೆ ಹಿಂದಿನ ದಿನವೇ ಮಾಡಿಡಬಹುದು) ಕರಿದ ಪೂರಿಗಳನ್ನು ತಿನ್ನುವ ಮೊದಲು ಕಾಯಿ ಹಾಲಿನಲ್ಲಿ ಅದ್ದಿ ಮೇಲೆ ಬೇಕಾದರೆ ಇನ್ನು ಸ್ವಲ್ಪ ಕಾಯಿ ಹಾಲು ಹಾಕಿ ಕೊಡಿ, ಮೊದಲೆ ಹಾಕಿಟ್ಟರೆ ಮೆತ್ತಗೆ ಆಗುತ್ತದೆ, ಇದು ಗರಿ ಗರಿಯಾಗಿದ್ದರೇನೆ ಚೆಂದ.
ಬೇಳೆ ಖಾರದ ಹೋಳಿಗೆ
ಸಾಮಾನ್ಯವಾಗಿ ಬೇಳೆ ಹೋಳಿಗೆ ಸಿಹಿ ಮಾಡುತ್ತಾರೆ! ಬೆಂದ ಬೇಳೆಗೆ ಖಾರಾ ಹಾಕಿ ರುಬ್ಬಿ ಮಾಡುವುದೇ ಈ ರೆಸಿಪಿ ವಿಶೇಷ!
ಮಾಡುವ ವಿಧಾನ:-
ಮೈದಾ, ಉಪ್ಪು,ಚಿಟಿಕೆ ಅರಿಷಿಣ, ಎಣ್ಣೆ ಹಾಕಿ, ಕಲೆಸಿ, ನೀರು ಸೇರಿಸಿ ಮೆತ್ತಗೆ ಕಣಕವನ್ನು ಕಲೆಸಿ ಮೇಲೆ ಸ್ವಲ್ಪ ಎಣ್ಣೆ ಹಾಕಿ ನೆನೆಯಲು ಇಡಿ.
ಕಾಯಿ ತುರಿ, ಮೆಣಸಿನ ಕಾಯಿ, ಕೊತ್ತಂಬರಿ ಸೊಪ್ಪು, ಹಿಂಗು ಸೇರಿಸಿ ತರಿ ತರಿಯಾಗಿ ರುಬ್ಬಿ, ಬೇಯಿಸಿದ 1 ಲೋಟ ತೊಗರಿ ಬೇಳೆ, ಉಪ್ಪು ಸೇರಿಸಿ, ರುಬ್ಬಿ ಹೂರಣ ತಯಾರಿಸಿ, ಉಂಡೆ ಮಾಡಿಕೊಳ್ಳಿ.
ಬಾಳೆ ಎಲೆಗೆ ಎಣ್ಣೆ ಸವರಿ, ಕಣಕವನ್ನು ತಟ್ಟಿ ಹೂರಣವನ್ನು ತುಂಬಿ, ಮಡಚಿ ಹೋಳಿಗೆ ಮಾಡಿ ಕಾದ ತವಾ ಮೇಲೆ ಎಣ್ಣೆ ಹಾಕಿ ಚೆನ್ನಾಗಿ ಬೇಯಿಸಿ, ತುಪ್ಪದೊಂದಿಗೆ ಬಿಸಿಯಾಗಿ ಬಡಿಸಿ.
ಧನ್ಯವಾದಗಳು.