ಗೋರಿ ಕಾಯಿ ಮಧುಮೇಹಿಗಳಿಗೆ ತುಂಬಾ ಒಳ್ಳೆಯದು! ಆರೋಗ್ಯಕ್ಕೆ ಎಲ್ಲರಿಗೂ ಒಳ್ಳೆಯದಾದರೂ ಅದರ ಸ್ವಲ್ಪ ಒಗರು ರುಚಿಯಿಂದ ಬಹಳ ಜನ ಅದನ್ನು ತಿನ್ನುವುದಿಲ್ಲ! ಹೀಗೆ ಮಾಡಿ ನೋಡಿ ಖಂಡಿತಾ ಇಷ್ಟ ಪಟ್ಟು ತಿನ್ನುತ್ತಾರೆ!

ಮಾಡುವ ವಿಧಾನ :-

100 ಗ್ರಾಂ ನಷ್ಟು ಗೋರಿ ಕಾಯಿ ತೊಳೆದು ಸಣ್ಣಗೆ ಹೆಚ್ಚಿ ಬೇಯಿಸಿ ಸೋರಿ ಹಾಕಿಡಿ.

2 ಚಮಚ ಕಡಲೇ ಬೇಳೆ 2 ಗಂಟೆ ನೆನೆಸಿಡಿ ನೀರು ಸೋರಿ ಹಾಕಿಡಿ.

4 ಚಮಚ ಕಾಯಿ ತುರಿದಿಡಿ.

      

ನೆಂದ ಕಡಲೇ ಬೇಳೆ, ಕಾಯಿ ತುರಿ, 4 ಹಸಿ ಮೆಣಸಿನಕಾಯಿ, (ಖಾರಾ ನಿಮ್ಮ ರುಚಿಗೆ ತಕ್ಕಷ್ಟು), ಕೊತ್ತಂಬರಿ ಸೊಪ್ಪು 1 ಚಮಚ ಹಾಕಿ ತರಿ ತರಿಯಾಗಿ ನೀರು ಹಾಕದೆ ರುಬ್ಬಿಡಿ. (ವಡೆಗೆ ರುಬ್ಬುವ ಹಾಗೆ)

ಬಾಣಲೆಯಲ್ಲಿ 2 ಚಮಚ ಎಣ್ಣೆ ಹಾಕಿ ಸಾಸಿವೆ, ಇಂಗು, ಚಿಟಿಕೆ ಅರಿಷಿಣ, ಕರಿಬೇವು ಹಾಕಿ ರುಬ್ಬಿದ ಮಿಶ್ರಣ ಹಾಕಿ ಕಡಿಮೆ ಉರಿಯಲ್ಲಿ ಸ್ವಲ್ಪ ಹಸಿ ವಾಸನೆ ಹೋಗುವವರೆಗೆ ಫ್ರೈ ಮಾಡಿ, ಉಪ್ಪು, ಬೆಂದ ಗೋರಿ ಕಾಯಿ ಹಾಕಿ ಕಲೆಸಿ ಕೊನೆಯಲ್ಲಿ ನಿಂಬೆ ರಸ ಸೇರಿಸಿದರೆ ರುಚಿಯಾದ, ಆರೋಗ್ಯಕರವಾದ ಗೋರಿ ಕಾಯಿ ಪಲ್ಯ ರೆಡಿ!

   

 

ಕೆಲವು ಕಡೆ ಈ ತರಕಾರಿಯನ್ನು ಚವಳಿ ಕಾಯಿ ಅನ್ನುತ್ತಾರೆ!

ಕಡಲೇ ಬೇಳೆ ಚಿತ್ರಾನ್ನ

ಇದೇ ರೀತಿಯಲ್ಲಿ ಒಗ್ಗರಣೆ ಮಾಡಿ, ರುಬ್ಬಿದ ಮಿಶ್ರಣ ಹಾಕಿ ಬಾಡಿಸಿದ ನಂತರ ಅನ್ನ ಸೇರಿಸಿ ಕಲೆಸಿದರೆ ರುಚಿಯಾದ ಕಡಲೇ ಬೇಳೆ ಚಿತ್ರಾನ್ನ ಸಿದ್ಧ!

ಧನ್ಯವಾದಗಳು.