DOODH PEDA ದೂದ್ ಪೇಡಾ
Indu Jayaram
SHARE
ಕೇವಲ 10 ನಿಮಿಷದಲ್ಲಿ ಸುಲಭವಾಗಿ ಮಾಡಬಹುದಾದ ಸಿಹಿ ರೆಸಿಪಿ!
ಮಾಡುವ ವಿಧಾನ:-
1 ಚಮತ ಬಿಸಿ ಹಾಲಿನಲ್ಲಿ ಸ್ವಲ್ಪ ಕುಂಕುಮ ಕೇಸರಿ ದಳ ಹಾಕಿಡಿ.
ದಪ್ಪ ತಳದ ಬಾಣಲೆಯಲ್ಲಿ 1 ಅಳತೆ ಹಾಲಿನ ಪುಡಿ, 1 ಅಳತೆ Condensrd milk, 1 ಚಮಚ ಮೈದಾ ಹಾಕಿ ಚೆನ್ನಾಗಿ ಕಲೆಸಿ. 1 ಚಮಚ ತುಪ್ಪ ಹಾಕಿ Medium ಉರಿಯಲ್ಲಿ ಕೈ ಬಿಡದಂತೆ ಕೆದಕುತ್ತಾ ಇರಿ. ಮಿಶ್ರಣ ಗಟ್ಟಿಯಾದಾಗ ಉರಿ ಕಡಿಮೆ ಮಾಡಿ ಕುಂಕುಮ ಕೇಸರಿ ಬೆರೆಸಿದ ಹಾಲು, 1 ಚಮಚ ತುಪ್ಪ ಹಾಕಿ ಚೆನ್ನಾಗಿ ಕಲೆಸಿ. ಮಿಶ್ರಣ ಬಾಣಲೆಯ ಅಂಚು ಬಿಡಲಾರಂಬಿಸಿ ಒಂದೇ ಉಂಡೆಯಂತೆ ಆದಾಗ ಬಾಣಲೆಯನ್ನು ಒಲೆಯಿಂದ ಇಳಿಸಿ ಸ್ವಲ್ಪ ಬೆಚ್ಚಗೆ ಆದಾಗ ತುಪ್ಪ ಸವರಿದ ಕೈಯಿಂದ ಚಿಕ್ಕ ಚಿಕ್ಕ ಉಂಡೆ ಮಾಡಿ ತಣ್ಣಗಾದ ಮೇಲೆ ತಿನ್ನಬಹುದು.
ಧನ್ಯವಾದಗಳು.