ಬಹಳ ರುಚಿಯಾದ, ಸುಲಭವಾಗಿ ಮಾಡಬಹುದಾದ ರೆಸಿಪಿ!
ಮಾಡುವ ವಿಧಾನ:-
1 ಪಾವು ಅನ್ನ ಮಾಡಿಡಿ.
3/4 ಭಾಗ ಕಾಯಿ ತುರಿದಿಡಿ.
4 ಹಸಿ ಮೆಣಸಿನಕಾಯಿ, 4 ಒಣ ಮೆಣಸಿನಕಾಯಿ ಹೆಚ್ಚಿಡಿ.
ಬಾಣಲೆಯಲ್ಲಿ 4 ಚಮಚ ತುಪ್ಪ ಹಾಕಿ 1 ಹಿಡಿ ಗೋಡಂಬಿ ಹುರಿದು ತೆಗೆದಿಡಿ.
ಅದೇ ಬಾಣಲೆಯಲ್ಲಿ ಸಾಸಿವೆ, ಕಡಲೇ ಬೇಳೆ, ಉದ್ದಿನ ಬೇಳೆ, ಕರಿ ಬೇವು, ಮೆಣಸಿನಕಾಯಿ, ಇಂಗು, ಕಾಯಿ ತುರಿ, ಉಪ್ಪು, ಅನ್ನ, ಕೊತ್ತಂಬರಿ ಸೊಪ್ಪು, ನಿಂಬೆ ರಸ ಹಾಕಿ ಕಲೆಸಿ ಕಡಿಮೆ ಉರಿಯಲ್ಲಿ ಮೂರ್ನಾಲ್ಕು ನಿಮಿಷ ಬಿಸಿ ಮಾಡಿದರೆ ರುಚಿಯಾದ ಕೋಕೋನಟ್ ರೈಸ್ ಸಿದ್ಧ!
ನಮ್ಮ ಮನೆಯಲ್ಲಿ ಇದನ್ನು ತೇಂಗಾಯ್ ಸಾಧು ಎನ್ನುತ್ತೇವೆ. ಹಬ್ಬದ ದಿನಗಳಲ್ಲಿ ತಪ್ಪದೆ ಮಾಡುವ ವಿಧಾನ ಇದು!
ಈ ರೆಸಿಪಿಯಲ್ಲಿ ಕಾಯಿ ತುರಿ, ತುಪ್ಪ, ಗೋಡಂಬಿ ಮುಖ್ಯವಾಗಿ ಬೇಕೇ ಬೇಕು. ಕಾಯಿ ತುರಿ ಹಾಕಿದಷ್ಟೂ ರುಚಿ ಹೆಚ್ಚು! ಅರಿಶಿಣ ಹಾಕಬಾರದು!
ಧನ್ಯವಾದಗಳು.
Leave A Comment