Chocolate ಮಕ್ಕಳ Favourite! ಇಷ್ಟ ಪಟ್ಟು ತಿನ್ನತ್ತಾರೆ. ಅವರಿಗಾಗಿ ಈ ವಿಶೇಷ ಲಡ್ಡು! ಮಾಡುವ ವಿಧಾನ:-

10 ಗೋಡಂಬಿ, 10 ಬಾದಾಮಿ ಸ್ವಲ್ಪ ಪುಡಿ ಮಾಡಿಡಿ.

4 ಚಮಚ ಚಾಕಲೇಟ್ ಸಾಸ್ ಸ್ವಲ್ಪ ಬಿಸಿ ಮಾಡಿ ಕರಗಿಸಿಡಿ.

   

ಬಾಣಲೆಯಲ್ಲಿ 1 ಲೋಟ Dessicated COCONUT ಪುಡಿ ಹಾಕಿ 2 ನಿಮಿಷ ಕಡಿಮೆ ಉರಿಯಲ್ಲಿ ಹುರಿದು 1/2 ಲೋಟ Condensed milk ಹಾಕಿ ಸ್ವಲ್ಪ ಗಟ್ಟಿಯಾಗಿ ಆಗುವವರೆಗೆ ಕಲೆಸಿ ಒಲೆಯಿಂದ ಇಳಿಸಿ. ಸ್ವಲ್ಪ ಬೆಚ್ಚಗಾದ ಮೇಲೆ ಚಿಕ್ಕ ಚಿಕ್ಕ ಉಂಡೆ ಮಾಡಿ ಚಾಕಲೇಟ್ ಸಾಸ್ ನಲ್ಲಿ ಅದ್ದಿ ಬಾದಾಮಿ ಪುಡಿ ಮೇಲೆ ಹೊರಳಿಸಿ 1 ಗಂಟೆ Fridge ನಲ್ಲಿಟ್ಟು ನಂತರ ಮಕ್ಕಳಿಗೆ ತಿನ್ನಲು ಕೊಡಿ.

ಧನ್ಯವಾದಗಳು.