ಕ್ಯಾರೆಟ್ ಹಲ್ವಾ ಎಲ್ಲರೂ ಇಷ್ಟ ಪಡುವ ಸಿಹಿ ತಿಂಡಿ. ಮಾಡುವುದು ಬಹಳ ಸುಲಭ!

ಮಾಡುವ ವಿಧಾನ:-

1/2 ಕೇಜಿ ಕ್ಯಾರೆಟ್ ತೊಳೆದು ಸಿಪ್ಪೆ ತೆಗೆದು ತುರಿದಿಡಿ.

ಬಾಣಲೆಯಲ್ಲಿ 4 ಚಮಚ ತುಪ್ಪ ಹಾಕಿ ಗೋಡಂಬಿ, ದ್ರಾಕ್ಷಿ ಹುರಿದು ತೆಗೆದಿಡಿ.

   

ಅದೇ ಬಾಣಲೆಯಲ್ಲಿ ತುರಿದ ಕ್ಯಾರೆಟ್ ಹಾಕಿ ಸ್ವಲ್ಪ ಹುರಿದು, 1/2 ಲೋಟ ಹಾಲು ಹಾಕಿ ಕ್ಯಾರೆಟ್ ಬೇಯಲು ಬಿಡಿ. ನಂತರ 100 ಗ್ರಾಂ ಸಕ್ಕರೆ, ಸ್ವಲ್ಪ ಖೋವ, ಚಿಟಿಕೆ ಏಲಕ್ಕಿ ಪುಡಿ, 2 ಚಮಚ ಫ್ರೆಶ್ ಕ್ರೀಮ್ ಹಾಕಿ ಕಡಿಮೆ ಉರಿಯಲ್ಲಿ ಸ್ವಲ್ಪ ಬೇಯಿಸಿ ಕೊನೆಯಲ್ಲಿ ಗೋಡಂಬಿ, ದ್ರಾಕ್ಷಿ ಹಾಕಿದರೆ ರುಚಿಯಾದ, ಆರೋಗ್ಯಕರವಾದ ಕ್ಯಾರೆಟ್ ಹಲ್ವಾ ಸಿದ್ಧ!

ಖೋವಾ ಮತ್ತು ಫ್ರೆಶ್ ಕ್ರೀಮ್ ಹಾಕಿದರೆ ಕ್ಯಾರೆಟ್ ಹಲ್ವ ರುಚಿ ಅದ್ಭುತವಾಗಿ ಇರುತ್ತದೆ! ನಿಮಗೆ ಬೇಕಾದರೆ ಹಾಕಿ.

ಕ್ಯಾರೆಟ್ ಹಲ್ವಾಗೆ ಸಿಹಿ ಹೆಚ್ಚು ಬೇಕಿಲ್ಲ, ನಿಮ್ಮ ರುಚಿಗೆ ತಕ್ಕಷ್ಟು ಹಾಕಿ.

ಧನ್ಯವಾದಗಳು.