ಚಪಾತಿ ಜೊತೆ, ಅನ್ನ ಸಾರಿನ ಜೊತೆ Side dish ಆಗಿ ತುಂಬಾ ಚೆನ್ನಾಗಿರುತ್ತದೆ!

ಮಾಡುವ ವಿಧಾನ:-

ಗುಂಡು ಬದನೆಯನ್ನು ತೆಳ್ಳಗೆ, ಗುಂಡಗೆ ಹೆಚ್ಚಿ ನೀರಲ್ಲಿ ಹಾಕಿಡಿ.

ಒಂದು ತಟ್ಟೆಯಲ್ಲಿ 4 ಚಮಚ ಚಿರೋಟಿ ರವೆ, 1 ಚಮಚ ಖಾರಾ ಪುಡಿ, 1 ಚಮಚ ಅಕ್ಕಿ ಹಿಟ್ಟು, 1/2 ಚಮಚ ಗಸಗಸೆ, ಉಪ್ಪು ಹಾಕಿ ಚೆನ್ನಾಗಿ ಕಲೆಸಿಡಿ.

ಸ್ವಲ್ಪ ಹುಳಿ ಬೇಕಾದರೆ 1/2 ಚಮಚ ಆಮ್ ಚೂರ್ ಪುಡಿ ಹಾಕಿ.

   

ತವಾ ಬಿಸಿಯಾಗಲು ಇಡಿ.

ನೀರಿನಿಂದ ತೆಗೆದ ಬದನೆಕಾಯಿ ಹೋಳುಗಳನ್ನು ರವೆ ಪುಡಿಯಲ್ಲಿ ಹೊರಳಿಸಿ ಕಾದ ತವಾದ ಮೇಲೆ ಹಾಕಿ ಸ್ವಲ್ಪ ಎಣ್ಣೆ ಹಾಕಿ ಕಡಿಮೆ ಉರಿಯಲ್ಲಿ ಎರಡೂ ಕಡೆ ಗರಿ ಗರಿಯಾಗಿ ಬೇಯಿಸಿದರೆ ಬದನೆ ತವಾ ಫ್ರೈ ಸಿದ್ಧ!

   

ಇದೇ ರೀತಿ ಆಲೂ ಗೆಡ್ಡೆಯಲ್ಲಿ ಕೂಡಾ ಮಾಡಬಹುದು.

ಧನ್ಯವಾದಗಳು.