BABY ALOO BIRIYANI ಬೇಬಿ ಆಲೂ ಬಿರಿಯಾನಿ
ಬೇಬಿ ಆಲೂ ಬಿರಿಯಾನಿ ಮಾಡುವ ವಿಧಾನ:-
1/4 ಬೇಬಿ ಆಲೂ ಗೆಡ್ಡೆಯನ್ನು ತೊಳೆದು, ಸಿಪ್ಪೆ ತೆಗೆದು, ಬಾಣಲೆಯಲ್ಲಿ 2 ಚಮಚ ಎಣ್ಣೆ ಹಾಕಿ, ಆಲೂ ಗೆಡ್ಡೆ ಹಾಕಿ ಸ್ವಲ್ಪ ಬಾಡಿಸಿ, ಉಪ್ಪು, ಖಾರ ಪುಡಿ ಹಾಕಿ ಫ್ರೈ ಮಾಡಿ ತೆಗೆದು ಇಡಿ.
1 ಬಟ್ಟಲು ಸಿಹಿ ಮೆಾಸರಿಗೆ, 1 ಚಮಚ ginger garlic paste, 1 ಚಮಚ ಖಾರ ಪುಡಿ, ತಲಾ 1/2 ಚಮಚ ಗರಂ ಮಸಾಲ, ಬಿರಿಯಾನಿ ಪುಡಿ, ಆಮ್ ಚೂರ್ ಪುಡಿ, ಧನಿಯಾ ಪುಡಿ, 1/4 ಚಮಚ ಜೀರಾ ಪುಡಿ, ಉಪ್ಪು ಹಾಕಿ ಕಲೆಸಿಡಿ.
ಒಂದು ಈರುಳ್ಳಿಯನ್ನು ಸಣ್ಣಗೆ, ತೆಳ್ಳಗೆ ಹೆಚ್ಚಿ, 1 ಚಮಚ ಎಣ್ಣೆ ಹಾಕಿ ಕೆಂಪಗೆ ಫ್ರೈ ಮಾಡಿ ಇಡಿ.
2 ಚಮಚ ಹಾಲಿನಲ್ಲಿ ಸ್ವಲ್ಪ ಕುಂಕುಮ ಕೇಸರಿ ದಳ ಹಾಕಿ ನೆನೆಯಲು ಇಡಿ.
ಕುಕ್ಕರಿನಲ್ಲಿ 4 ಚಮಚ ಎಣ್ಣೆ ಹಾಕಿ, ಚಕ್ಕೆ, ಲವಂಗ, ಏಲಕ್ಕಿ ಹಾಕಿ ಬಾಡಿಸಿ, ಮೆಾಸರಿನ ಮಿಶ್ರಣ ಹಾಕಿ, ತಳದಲ್ಲಿ ಫ್ರೈ ಮಾಡಿದ ಆಲೂ ಗೆಡ್ಡೆ ಹಾಕಿ, ನಂತರ ತೊಳೆದ 1 ಬಟ್ಟಲು ಬಾಸುಮತಿ ಅಕ್ಕಿ ಹಾಕಿ, ಮೇಲೆ ಕುಂಕುಮ ಕೇಸರಿ ನೆನೆಸಿದ ಹಾಲು ಹಾಕಿ, ಕರಿದ ಈರುಳ್ಳಿ, ಹೆಚ್ಚಿದ ಕೊತ್ತಂಬರಿ ಸೊಪ್ಪು, ಪುದೀನ,
1 ಬಟ್ಟಲು ನೀರು ಹಾಕಿ, ಕುಕ್ಕರ್ ಮುಚ್ಚಳ ಹಾಕಿ 2 ವಿಷಲ್ ಕೂಗಿಸಿ, ನಂತರ ಮುಚ್ಚಳ ತೆಗೆದು ಮೆದುವಾಗಿ ಕಲೆಸಿ, ಮೊಸರು ಬಜ್ಜಿಯೆಾಂದಿಗೆ ಬಡಿಸಿ.
ಧನ್ಯವಾದಗಳು.