ಅವರೇ ಕಾಯಿಯನ್ನು ಇಷ್ಟ ಪಡದವರು ಬಹಳ ಕಡಿಮೆ! ಅವರೆ ಕಾಯಿಯಿಂದ ಏನು ಮಾಡಿದರೂ ಚೆಂದವೇ! ಒಳ್ಳೆಯ ಸೊಗಡಿರುವ ಅವರೆ ಕಾಯಿಯಿಂದ ಸಾರು ಮಾಡಿದರೆ ತುಂಬಾ ಚೆನ್ನಾಗಿರುತ್ತದೆ.

ಮಾಡುವ ವಿಧಾನ:-

ಅವರೆ ಕಾಳು 1 ಪಾವಿನಷ್ಟು ಬೇಯಿಸಿಡಿ.

ಬೆಂದ ಅವರೆ ಕಾಳು 2 ಚಮಚ, 2 ಚಮಚ ಕಾಯಿ ತುರಿ, 1 ಚಮಚ ಸಾರಿನ ಪುಡಿ, 2 ಹಸಿ ಟೊಮೇಟೋ ನುಣ್ಣಗೆ ರುಬ್ಬಿಡಿ. ಖಾರಾ ನಿಮ್ಮ ರುಚಿಗೆ ತಕ್ಕ ಹಾಗೆ ಹಾಕಿ.

ಬೆಂದ ಅವರೆ ಕಾಳಿಗೆ ರುಬ್ಬಿದ ಮಿಶ್ರಣ, ಸ್ವಲ್ಪ ಹುಣೆಸೆ ರಸ, ಉಪ್ಪು, ಸ್ವಲ್ಪ ನೀರು ಹಾಕಿ ಕುದಿಸಿ.

   

ಒಗ್ಗರಣೆಗೆ ಸಾಸಿವೆ, ಇಂಗು, ಕರಿ ಬೇವು ಹಾಕಿ, ಹೆಚ್ಚಿದ ಕೊತ್ತಂಬರಿ ಸೊಪ್ಪು ಹಾಕಿದರೆ ರುಚಿಯಾದ ಅವರೆ ಕಾಳು ಸಾರು ಸಿದ್ಧ!

       

ಎಳೆಯದಾದ 6 ರಿಂದ 8 ಅವರೆ ಕಾಯಿಯನ್ನು ಪೂರ್ಣವಾಗಿ ಕೊನೆಗಳನ್ನು, ನಾರನ್ನು ತೆಗೆದು, ಸಿಪ್ಪೆ ಸಮೇತ ತೊಳೆದು ಬೇಯಲು ಹಾಕಿದರೆ ಅವರೆ ಕಾಯಿಯ ಸುವಾಸನೆ ಸಾರಿಗೆ ಬರುತ್ತದೆ. ಅವರೆ ಕಾಯಿಯಲ್ಲಿ ಹುಳುಗಳು ತುಂಬಾ ಇರುತ್ತದೆ. ದಯವಿಟ್ಟು ಚೆನ್ನಾಗಿ ನೋಡಿ ಹಾಕಿ!

ಧನ್ಯವಾದಗಳು.