ನಗುನಗುತಾ ನಲಿ ನಲಿ ಏನೇ ಆಗಲಿ ಈ ಹಾಡನ್ನು ಕೇಳದ, ನೋಡದ ಕನ್ನಡಿಗರೇ ಇಲ್ಲ! ರಾಜ್ ಕುಮಾರ್ ಅವರ ಬಂಗಾರದ ಮನುಷ್ಯ ಚಿತ್ರದ ಈ ಹಾಡನ್ನು ಮರೆಯಲು ಸಾಧ್ಯವಿಲ್ಲ! ನಮ್ಮ ಜೀವನದಲ್ಲಿ ನಗು ಬಹಳ ಮುಖ್ಯವಾದದ್ದು! ಹಾಗಾಗಿ ನಗುವ ಆಲೂ ರೆಸಿಪಿ ನಿಮಗಾಗಿ!

ಮಾಡುವ ವಿಧಾನ:-

4 ಆಲೂಗೆಡ್ಡೆ ತೊಳೆದು ಬೇಯಿಸಿ ಸಿಪ್ಪೆ ತೆಗೆದು ಚೆನ್ನಾಗಿ ಪುಡಿ ಮಾಡಿಡಿ.

   

ಒಂದು ಬಟ್ಟಲಿನಲ್ಲಿ ಆಲೂ ಮಿಶ್ರಣ, 1 ಚಮಚ ಕರಿ ಮೆಣಸಿನ ಪುಡಿ, 1/2 ಚಮಚ ಚಾಟ್ ಮಸಾಲ ಪುಡಿ,1 /2 ಚಮಚ ಆಮ್ ಚೂರ್ ಪುಡಿ, ಉಪ್ಪು, 2 ಚಮಚ ಕಾರ್ನ್ ಫ್ಲೋರ್, 4 ಚಮಚ ಬ್ರೆಡ್ ಕ್ರಂಬ್ಸ್, 1 ಚಮಚ ಚಿರೋಟೆ ರವೆ (ಬೇಕಾದರೆ) ಹಾಕಿ ಚೆನ್ನಾಗಿ ಕಲೆಸಿ. ಮಿಶ್ರಣ ಗಟ್ಟಿಯಾಗಿ ಇರಬೇಕು, ನೀರು ಸೇರಿಸ ಬೇಡಿ, ಬೆಂದ ಆಲೂಗೆಡ್ಡೆಯಲ್ಲಿರುವ ನೀರಿನ ಅಂಶವೇ ಸಾಕಾಗುತ್ತದೆ. ಮಿಶ್ರಣಕ್ಕೆ ಹಿಡಿಸುವಷ್ಟು ಕಾರ್ನ್ ಫ್ಲೋರ್, ಬ್ರೆಡ್ ಕ್ರಂಬ್ಸ್ ಸೇರಿಸಿ.

   

ಒಂದು ಬಟರ್ ಪೇಪರ್ ಗೆ ಎಣ್ಣೆ ಸವರಿ ಆಲೂ ಮಿಶ್ರಣ ಸ್ವಲ್ಪ ದಪ್ಪಗೆ ತಟ್ಟಿ ಯಾವುದಾದರು ಮುಚ್ಚಳದ ಸಹಾಯದಿಂದ ಗುಂಡಗೆ ಕಟ್ ಮಾಡಿ 2 ಕಣ್ಣು ಮಾಡಿ, ಚಮಚದಿಂದ ಬಾಯಿ ಮಾಡಿ ಕಾದ ಎಣ್ಣೆಯಲ್ಲಿ ಕರಿಯಿರಿ.

ಮಕ್ಕಳು ಬಹಳ ಇಷ್ಟ ಪಟ್ಟು ತಿನ್ನುತ್ತಾರೆ!

ಧನ್ಯವಾದಗಳು.