ಸಾಧಾರಣ ಖಾರಾ ಸೇವ್ ಗಿಂತ ಸ್ವಲ್ಪ ರುಚಿ ಭಿನ್ನ!

ಮಾಡುವ ವಿಧಾನ:-

ಆಲೊಗೆಡ್ಡೆ ಬೇಯಿಸಿ ಸಿಪ್ಪೆ ತೆಗೆದು ಬಿಸಿಯಿರುವಾಗಲೇ ನುಣ್ಣಗೆ ಪುಡಿ ಮಾಡಿಡಿ.

   

ಬಟ್ಟಲಿನಲ್ಲಿ ಆಲೂ ಮಿಶ್ರಣಕ್ಕೆ ಹಿಡಿಸುವಷ್ಟು ಕಡಲೆ ಹಿಟ್ಟು, 1 ಚಮಚ ಖಾರಾ ಪುಡಿ, 1 ಚಮಚ ಆಮ್ ಚೂರ್ ಪುಡಿ, 2 ಚಮಚ ಅಕ್ಕಿ ಹಿಟ್ಟು, ಉಪ್ಪು, 1 ಚಮಚ ಬೆಣ್ಣೆ , 1/2 ಚಮಚ ಓಂ ಕಾಳು ಹಾಕಿ ಚೆನ್ನಾಗಿ ಕಲೆಸಿ.

   

ಚಕ್ಕುಲಿ ಒರಳಿಗೆ ಸ್ವಲ್ಪ ಎಣ್ಣೆ ಸವರಿ ದೊಡ್ಡ ರಂಧ್ರದ ಓಂ ಪುಡಿ ಬಿಲ್ಲೆ ಹಾಕಿ ಕಾದ ಎಣ್ಣೆಗೆ ನೇರವಾಗಿ ಸೇವ್ ಹಿಂಡಿ ಕೆಂಪಗೆ ಕರಿದರೆ ಗರಗರಿಯಾದ ಆಲೂ ಸೇವ್ ಸಿದ್ಧ!

ಧನ್ಯವಾದಗಳು.