ಉದ್ದು ತನ್ನಲ್ಲಿ ಬಹಳ ಒಳ್ಳೆಯ ಅಂಶಗಳನ್ನು ಹೊಂದಿದೆ. ಅದರ ಅನ್ನ ಬಹಳ ರುಚಿಯಾಗಿರುತ್ತೆ.

ಮಾಡುವ ವಿಧಾನ:-

1 ಪಾವಿನಷ್ಟು ಅನ್ನ ಮಾಡಿಡಿ.

2 ಟೇಬಲ್ ಚಮಚ ಉದ್ದಿನ ಬೇಳೆ ಸ್ವಲ್ಪ ತುಪ್ಪ ಹಾಕಿ ಕೆಂಪಗೆ ಹುರಿದು ನುಣ್ಣಗೆ ಪುಡಿ ಮಾಡಿಡಿ.

4 ಉದ್ದಿನ ಹಪ್ಪಳ ಕರಿದಿಡಿ.

   

ಬಾಣಲೆಯಲ್ಲಿ 2 ಚಮಚ ಎಣ್ಣೆ/ತುಪ್ಪ ಹಾಕಿ ಸಾಸಿವೆ, ಜೀರಿಗೆ, ಇಂಗು, ಕರಿ ಬೇವು, 6 ಮುರಿದ ಒಣ ಮೆಣಸಿನ ಕಾಯಿ , ಸ್ವಲ್ಪ ಕಡಲೇ ಬೀಜ, ಗೋಡಂಬಿ ಹಾಕಿ ಹುರಿದು ಪುಡಿ ಮಾಡಿದ ಉದ್ದಿನ ಬೇಳೆ ಹಾಕಿ ಸ್ವಲ್ಪ ಹುರಿದು ಅನ್ನ, ಉಪ್ಪು, ಕೊತ್ತಂಬರಿ ಸೊಪ್ಪು, 4 ಚಮಚ ಒಣ ಕೊಬ್ಬರಿ 1/2 ನಿಂಬೆ ರಸ ಹಾಕಿ ಕಲೆಸಿ ಕೊನೆಯಲ್ಲಿ ಕರಿದು ಮುರಿದ ಉದ್ದಿನ ಹಪ್ಪಳ ಹಾಕಿ ಕಲೆಸಿದರೆ ರುಚಿಯಾದ ಉದ್ದಿನ ಅನ್ನ ಸಿದ್ಧ!

   

ತಮಿಳುನಾಡಿನ ವಿಶೇಷ ಈ ರೆಸಿಪಿ!

ಈ ಅನ್ನಕ್ಕೆ ಅರಿಶಿಣ ಹಾಕಬಾರದು.

ಧನ್ಯವಾದಗಳು.