ಬೆಳಗ್ಗೆಯ ತಿಂಡಿಗೆ ಹೇಳಿ ಮಾಡಿಸಿದ ರೆಸಿಪಿ!

ಬಾಂಬೆ ಸಾಗು ಮಾಡುವ ವಿಧಾನ:-

1 ಈರುಳ್ಳಿ, 1 ಟೊಮ್ಯಾಟೋ, 2 ಆಲೂಗೆಡ್ಡೆ, 4 ಹಸಿ ಮೆಣಸಿನಕಾಯಿ, ಸ್ವಲ್ಪ ಕೊತ್ತಂಬರಿ ಸೊಪ್ಪು ಸಣ್ಣಗೆ ಹೆಚ್ಚಿಡಿ.

2 ಚಮಚ ಕಡಲೇ ಹಿಟ್ಟು ಅಥವಾ ಹುರಿಗಡಲೆ ಹಿಟ್ಟು 1/2 ಲೋಟ ನೀರು ಹಾಕಿ ಕಲೆಸಿಡಿ.

  

ಬಾಣಲೆಯಲ್ಲಿ 4 ಚಮಚ ಎಣ್ಣೆಯನ್ನು ಹಾಕಿ, ಸಾಸಿವೆ, ಜೀರಿಗೆ, ಕಡಲೇ ಬೇಳೆ, ಉದ್ದಿನ ಬೇಳೆ, ಕರಿ ಬೇವು ಹಾಕಿ ಸ್ವಲ್ಪ ಹುರಿದು ಚಿಟಿಕೆ ಅರಿಶಿಣ, ಈರುಳ್ಳಿ, ಆಲೂಗೆಡ್ಡೆ, ಹಸಿ ಮೆಣಸಿನ ಕಾಯಿ, ಟೊಮೇಟೋ ಹಾಕಿ ಬಾಡಿಸಿ,1 ಚಮಚ Ginger garlic paste, ಉಪ್ಪು, 1/2 ಚಮಚ ಧನಿಯಾ ಪುಡಿ ಹಾಕಿ ಕಲೆಸಿದ ಕಡಲೇ ಹಿಟ್ಟನ್ನು ಹಾಕಿ ಕಡಿಮೆ ಉರಿಯಲ್ಲಿ ಕುದಿಸಿ ಹೆಚ್ಚಿದ ಕೊತ್ತಂಬರಿ ಸೊಪ್ಪು, ನಿಂಬೆ ರಸ ಹಾಕಿದರೆ ರುಚಿಯಾದ ಬಾಂಬೆ ಸಾಗು ಸಿದ್ಧ! ಇದು ಚಪಾತಿ, ಪೂರಿ ಜೊತೆ ಕೂಡಾ ತುಂಬಾ ಚೆನ್ನಾಗಿರುತ್ತದೆ.

ನೀವು ಬೇಕಾದರೆ ಆಲೂಗೆಡ್ಡೆಯನ್ನು ಕುಕ್ಕರಿನಲ್ಲಿ ಬೇಯಿಸಿ ಪುಡಿ ಮಾಡಿ ಹಾಕಬಹುದು.

ನಿಮಗೆ Ginger garlic paste, ಧನಿಯಾ ಪುಡಿ ಬೇಡವಾಗಿದ್ದರೆ 2 ಚಮಚ ಕಾಯಿ ತುರಿ, ಚಿಟಿಕೆ ಸಕ್ಕರೆ ಹಾಕಬಹುದು.

 

ರವಾ ಇಡ್ಲಿ ಮಾಡುವ ವಿಧಾನ:-

ಬಾಣಲೆಯಲ್ಲಿ 2 ಚಮಚ ಎಣ್ಣೆ ಹಾಕಿ ಸಾಸಿವೆ, ಜೀರಿಗೆ, ಹೆಚ್ಚಿದ ಕರಿ ಬೇವು, ಸಣ್ಣಗೆ ಮುರಿದ ಗೋಡಂಬಿ 6, 1 ಲೋಟ ಚಿರೋಟಿ ರವೆ ಹಾಕಿ ಕೆಂಪಗೆ ಹುರಿದಿಡಿ.

  

ರವೆ ಸ್ವಲ್ಪ ತಣ್ಣಗಾದ ಮೇಲೆ ಉಪ್ಪು, ಸೋಡಾ, ಹೆಚ್ಚಿದ ಕೊತ್ತಂಬರಿ ಸೊಪ್ಪು (ಜಾಸ್ತಿಯಾಗಿ ಹಾಕಿದಷ್ಟೂ ಚೆಂದ) ತುರಿದ ಕ್ಯಾರೆಟ್ 1 ಬೇಕಾದರೆ ಹಾಕಿ, 1 1/2 ಲೋಟ ಹುಳಿ ಮೊಸರು ಹಾಕಿ ಕಲೆಸಿಡಿ.

  

ಕುಕ್ಕರಿನಲ್ಲಿ ನೀರು ಬಿಸಿಯಾಗಲು ಇಡಿ. ಇಡ್ಲಿ ತಟ್ಟೆಗಳಿಗೆ ತುಪ್ಪ ಸವರಿ ರವೆ ಮಿಶ್ರಣ ಹಾಕಿ 10 ರಿಂದ 12 ನಿಮಿಷ ಬೇಯಿಸಿದರೆ ರವಾ ಇಡ್ಲಿ ಸಿದ್ಧ!

ಧನ್ಯವಾದಗಳು.