OM KALANNA ಓಂ ಕಾಳನ್ನ
ಓಂ ಕಾಳನ್ನ ಮಾಡುವ ವಿಧಾನ:-
1 ಪಾವು (1/4 ಕೇಜಿ) ಅಕ್ಕಿ ತೊಳೆದು ಅನ್ನ ಮಾಡಿಡಿ.
2 ಟೀ ಚಮಚ ಓಂ ಕಾಳು, 2 ಟೀ ಚಮಚ ಕರಿ ಮೆಣಸು ಹುರಿದು ತರಿ ತರಿಯಾಗಿ ಕುಟ್ಟಿ ಪುಡಿ ಮಾಡಿಡಿ.
1 ಚಿಕ್ಕ ಬೆಳ್ಳುಳ್ಳಿ ಸಿಪ್ಪೆ ಬಿಡಿಸಿ ಜಜ್ಜಿಡಿ. ಬೆಳ್ಳುಳ್ಳಿ ಬೇಡದವರು ಒಗ್ಗರಣೆಗೆ ಇಂಗು ಹಾಕಬಹುದು.
ಬಾಣಲೆಯಲ್ಲಿ 4 ಚಮಚ ತುಪ್ಪ ಹಾಕಿ ಸಾಸಿವೆ, ಜೀರಿಗೆ, ಕರಿ ಬೇವು, ಬೆಳ್ಳುಳ್ಳಿ ಹಾಕಿ ಬಾಡಿಸಿ ಕುಟ್ಟಿದ ಪುಡಿ, ಉಪ್ಪು ಹಾಕಿ ಕಲೆಸಿ, ಮಾಡಿಟ್ಟ ಅನ್ನ ಹಾಕಿ ಕಲೆಸಿ ಕೊನೆಯಲ್ಲಿ ನಿಂಬೆ ರಸ ಹಾಕಿದರೆ ರುಚಿಯಾದ, ಆರೋಗ್ಯಕರವಾದ ಓಂ ಕಾಳನ್ನ ಸಿದ್ಧ!
ಈ ಅನ್ನ ಬಾಣಂತಿಯರಿಗೆ ಬಹಳ ಒಳ್ಳೆಯದು. ಅವರಿಗೆ ಕೊಡುವುದಾದರೆ ಹುಳಿ ಹಾಕದೆ ಮಾಡಿ ಕೊಡಿ. ನಮ್ಮ ಅಮ್ಮನ ಕೈ ರುಚಿ ಇದು!
ಈ ಅನ್ನ ತುಪ್ಪ ಹಾಕಿ ಮಾಡಿದರೆ ತುಂಬಾ ಚೆನ್ನಾಗಿರುತ್ತದೆ!
ಬೆಳ್ಳುಳ್ಳಿ, ಇಂಗು ಎರಡೂ ಹಾಕದೆ ಕೂಡಾ ಮಾಡಬಹುದು. ಏಕೆಂದರೆ ಓಂ ಕಾಳು ಅಷ್ಟು ಘಮ, ರುಚಿ ಹೊಂದಿದೆ.
ಧನ್ಯವಾದಗಳು.