ಎಲ್ಲರೂ ಇಷ್ಟ ಪಡುವ ಸಿಹಿ.

ಮಾಡುವ ವಿಧಾನ:-

1 ಲೋಟ ಬೆಲ್ಲ ಸಣ್ಣಗೆ ತುರಿದಿಡಿ.

1 1/4 ಲೋಟದಷ್ಟು ಸಣ್ಣಗೆ ಹೆಚ್ಚಿದ ಗೋಡಂಬಿ, ಬಾದಾಮಿ, ಹುರಿದು ಸಿಪ್ಪೆ ತೆಗೆದ ಕಡಲೇ ಬೀಜ, ಹುರಿಗಡಲೆ, ಕೊಬ್ಬರಿ ತುರಿ, ಹುರಿದ ಗಸಗಸೆ, ಬಿಳಿ ಎಳ್ಳು, ಚಿಟಿಕೆ ಏಲಕ್ಕಿ ಪುಡಿ ( ಎಲ್ಲಾ ಸೇರಿಸಿ ಅಳತೆ ಮಾಡಿ) ಸಿದ್ದ ಮಾಡಿಡಿ.

ದಪ್ಪ ತಳದ ಬಾಣಲೆಯಲ್ಲಿ 1/2 ಲೋಟ ನೀರು, ಬೆಲ್ಲ ಹಾಕಿ ಕುದಿಯಲು ಇಡಿ. ಆಗಾಗ ಕಲೆಸುತ್ತಾ ಇರಿ. ಉರಿ ಕಡಿಮೆ ಮಾಡಿ.

   

ಪಾಕ ಗಟ್ಟಿಯಾಗಿ ಗೆಜ್ಜೆ ಪಾಕ ಬಂದಾಗ ( ಸ್ವಲ್ಪ ಪಾಕ ತೆಗೆದು ನೀರಿಗೆ ಹಾಕಿದಾಗ ಅದು ಕಲ್ಲಿನಂತಿರಬೇಕು. ನೀರಿನಲ್ಲಿ ಕದಡಿ ಹೋಗಬಾರದು, ಪಾಕ ಗುಳ್ಳೆಯ ( Bubbles) ಹಾಗೆ ಕುದಿಯುತ್ತದೆ), ಗೋಡಂಬಿ ಮಿಶ್ರಣವನ್ನು ಪಾಕಕ್ಕೆ ಹಾಕಿ ಚೆನ್ನಾಗಿ ಕಲೆಸಿ ತುಪ್ಪ ಸವರಿದ ತಟ್ಟೆಗೆ ಹಾಕಿ ಸ್ವಲ್ಪ ಬೆಚ್ಚಗಾದ ಮೇಲೆ ನಿಮಗೆ ಬೇಕಾದ ಆಕರದಲ್ಲಿ ಕತ್ತರಿಸಿ ಸವಿಯಿರಿ.

ನೀವು ಬೇಕಾದರೆ ನಿಮಗಿಷ್ಟವಾದ ಯಾವುದಾದರೂ ಒಂದು ಪದಾರ್ಥ ಹಾಕಿ ಮಾಡಬಹುದು.

ಎಲ್ಲರಿಗೂ ರಕ್ಷಾ ಬಂಧನದ ಶುಭಾಶಯಗಳು.

ಧನ್ಯವಾದಗಳು.