KUNDA ಕುಂದಾ
Indu Jayaram
SHARE
ಬೆಳಗಾವಿಯ ಹೆಮ್ಮೆಯ ಸಿಹಿ ತಿಂಡಿ! ಬೆಳಗಾವಿಯನ್ನು ಕುಂದಾ ನಗರಿ ಎಂದೇ ಕರೆಯುತ್ತಾರೆ!
ಮಾಡುವ ವಿಧಾನ:-
1 ಲೀಟರ್ ಗಟ್ಟಿ ಹಾಲನ್ನು ಕಾಯಲು ಇಡಿ. ಆಗಾಗ ಕಲೆಸುತ್ತಾ ಕುದಿಸಿ ಹಾಲು 1/3 ಭಾಗಕ್ಕೆ ಬರುವವರೆಗೆ ಕುದಿಸಿ.
ಕಾದ ಹಾಲಿಗೆ 100 ಮಿ. ಲೀ. ಗಟ್ಟಿ ಮೊಸರು ಹಾಕಿ ಕಲೆಸಿ. ಹಾಲು ಒಡೆಯುತ್ತದೆ. ಉರಿ ಕಡಿಮೆ ಮಾಡಿ.
ಇನ್ನೊಂದು ಬಾಣಲೆಯಲ್ಲಿ 120 ಗ್ರಾಂ ನಷ್ಟು ಸಕ್ಕರೆ ಹಾಕಿ ನೀರು ಸೇರಿಸದೆ ಕಲೆಸುತ್ತಾ ಇರಿ. (ಸಿಹಿ ನಿಮ್ಮ ರುಚಿಗೆ ತಕ್ಕಷ್ಟು) ಸಕ್ಕರೆ ಕರಗಿ ಕಂದು ಬಣ್ಣ ಬಂದ ತಕ್ಷಣ ಹಾಲಿನ ಮಿಶ್ರಣವನ್ನು ಹಾಕಿ ಚೆನ್ನಾಗಿ ಕಲೆಸಿ ಕಡಿಮೆ ಉರಿಯಲ್ಲಿ ಹಾಲಿನ ನೀರಿನಂಶ ಪೂರ್ತಿ ಹೋಗಿ ಪೇಸ್ಟ್ ತರಹ ಆಗುತ್ತದೆ. ಕೊನೆಯಲ್ಲಿ ಏಲಕ್ಕಿ ಪುಡಿ, ಸಣ್ಣಗೆ ಹೆಚ್ಚಿದ ಗೋಡಂಬಿ, ಬಾದಾಮಿ ಸ್ವಲ್ಪ ಹಾಕಿದರೆ ರುಚಿಯಾದ ಕುಂದಾ ಸಿದ್ಧ!
ಈ ಕುಂದಾ ಮಾಡಲು ಸುಮಾರು 30 ನಿಮಿಷ ಬೇಕು.
ಧನ್ಯವಾದಗಳು.