KARJI KAYI ಕರ್ಜಿ ಕಾಯಿ

Categories: Kannada, Tindi TinisuPublished On: November 27, 20170 Comments0.3 min read
Indu Jayaram
SHARE
ಎಲ್ಲಾ ಹಬ್ಬಗಳಲ್ಲಾ ಸಾಮಾನ್ಯವಾಗಿ ಮಾಡುವ ಸಿಹಿ ತಿಂಡಿ. ತಾಯಿ ವರ ಮಹಾಲಕ್ಷ್ಮಿಗೂ ಪ್ರಿಯವಾದದ್ದು!

ಮಾಡುವ ವಿಧಾನ:-

ಮೊದಲು ಕಣಕದ ಹಿಟ್ಟು ಕಲೆಸಿಡೋಣ.

1 ಲೋಟ ಚಿರೋಟಿ ರವೆಗೆ 2 ಚಮಚ ಮೈದಾ ಹಿಟ್ಟು, ಚಿಟಿಕೆ ಉಪ್ಪು, 4 ಚಮಚ ಕಾದ ತುಪ್ಪ ಹಾಕಿ ಕಲೆಸಿ ಸ್ವಲ್ಪ ನೀರು ಹಾಕಿ ಪೂರಿ ಹಿಟ್ಚಿನ ಹದಕ್ಕೆ ಕಲೆಸಿ 1/2 ಗಂಟೆ ಮುಚ್ಚಿಡಿ.

ಹೂರಣಕ್ಕೆ :- 1/2 ಲೋಟ ಕಡಲೇ ಬೀಜ ಹುರಿದು ಸಿಪ್ಪೆ ತೆಗೆದಿಡಿ.

2 ಚಮಚ ಬಿಳಿ ಎಳ್ಳು ಹುರಿದಿಡಿ.

4 ಚಮಚ ಒಣ ಕೊಬ್ಬರಿ ತುರಿದಿಡಿ.

2 ಚಮಚ ಹುರಿಗಡಲೆ ಆರಿಸಿಡಿ.

1 ಚಮಚ ಗಸಗಸೆ ಹುರಿದಿಡಿ .

1 1/2 ಲೋಟ ಬೆಲ್ಲ ತುರಿದಿಡಿ.

4 ಏಲಕ್ಕಿ ಪುಡಿ ಮಾಡಿಡಿ.

  

ಮೊದಲು ಕಡಲೇ ಬೀಜ, ಹುರಿಗಡಲೆ, ಬಿಳಿ ಎಳ್ಳು, ಗಸಗಸೆ, ಕೊಬ್ಬರಿ ತುರಿ ಪುಡಿ ಮಾಡಿ, ನಂತರ ಬೆಲ್ಲ ಹಾಕಿ ಸ್ವಲ್ಪ ಮತ್ತೆ ಪುಡಿ ಮಾಡಿ ಏಲಕ್ಕಿ ಪುಡಿ ಹಾಕಿ ಕಲೆಸಿದರೆ ಹೂರಣದ ಪುಡಿ ಸಿದ್ಧ.

ಕಣಕದ ಹಿಟ್ಟನ್ನು ಮತ್ತಷ್ಟು ನಾದಿ ಚಿಕ್ಕ ಚಿಕ್ಕ ಪೂರಿ ಲಟ್ಟಿಸಿ ಮಧ್ಯದಲ್ಲಿ ಹೂರಣದ ಪುಡಿ ಹಾಕಿ ಸುತ್ತಲೂ ನೀರು ಸವರಿ ಮಡಚಿ ಅಂಚುಗಳನ್ನು ಅಂಟಿಸಿ ಒತ್ತಿ ಕಾದ ಎಣ್ಣೆಯಲ್ಲಿ ಹಾಕಿ ಗರಿ ಗರಿಯಾಗಿ ಕರಿದು ಗಾಳಿಯಾಡದ ಡಬ್ಬದಲ್ಲಿ ಹಾಕಿಡಿ.

  

ನೀವು ಬೇಕಾದರೆ ಕೊಬ್ಬರಿ ತುರಿ, ಸಕ್ಕರೆ ಪುಡಿ, ಏಲಕ್ಕಿ ಪುಡಿ ಸೇರಿಸಿ ಹೂರಣದ ಪುಡಿ ಮಾಡಬಹುದು.

ಅಥವಾ ಕಾಯಿ ತುರಿಗೆ ಬೆಲ್ಲ ತುರಿ ಹಾಕಿ ಕುದಿಸಿ ಏಲಕ್ಕಿ ಪುಡಿ, ಹುರಿದ ಗಸಗಸೆ ಸ್ವಲ್ಪ ಸೇರಿಸಿ ಕುದಿಸಿ ಹೂರಣದ ಉಂಡೆ ಮಾಡಿ ಕರಿಗಡುಬು ಮಾಡಬಹುದು‌.

ಅಥವಾ ತೊಗರಿ ಬೇಳೆ ಬೇಯಿಸಿ ಬೆಲ್ಲದ ಜೊತೆ ಕುದಿಸಿ ಕಾಯಿತುರಿ, ಏಲಕ್ಕಿ ಪುಡಿ ಹಾಕಿ ರುಬ್ಬಿ ಹೂರಣದ ಉಂಡೆ ಮಾಡಿ ಕರಿಯಬಹುದು.

ಆಯ್ಕೆ ನಿಮ್ಮದು.

ಧನ್ಯವಾದಗಳು.

About the Author: Indu Jayaram

Indu Jayaram is a homemaker and regularly writes on home cooked food. She has more than 10,000 followers in her facebook page https://www.facebook.com/pg/indumathijayaram/

Leave A Comment