ವರಮಹಾಲಕ್ಷ್ಮಿ ದೇವಿಗೆ ಇಷ್ಷವಾದ ನೈವೇದ್ಯ ಗುಡಾನ್ನ! ನೀವು ಲಲಿತಾ ಸಹಸ್ರ ನಾಮದಲ್ಲಿ ಕೇಳಿರಬಹುದು ” “ಗುಡಾನ್ನ ಪ್ರಿಯೆ”ಎಂದು! ಇದೇ ಆ ಗುಡಾನ್ನ! ಸಂಸ್ಕೃತದಲ್ಲಿ ಗುಡಾ ಎಂದರೆ ಬೆಲ್ಲ ಎಂದು ಅರ್ಥ! ಬೆಲ್ಲದಿಂದ ಮಾಡಿದ ಅನ್ನವನ್ನು ಗುಡಾನ್ನ ಎನ್ನುತ್ತಾರೆ! ಮಾಡುವುದು ಬಹಳ ಸುಲಭ!
ಮಾಡುವ ವಿಧಾನ:-
1 ಲೋಟ ಅಕ್ಕಿ ತೊಳೆದು ಅನ್ನ ಮಾಡಿಡಿ.
1 ಲೋಟ ಒಣ ಕೊಬ್ಬರಿ ತುರಿದಿಡಿ.
1 ಲೋಟ ಬೆಲ್ಲ ತುರಿದಿಡಿ.
ಬಾಣಲೆಯಲ್ಲಿ 6 ಚಮಚ ತುಪ್ಪ ಹಾಕಿ ಗೋಡಂಬಿ, ದ್ರಾಕ್ಷಿ ಹುರಿದು ತೆಗೆದಿಡಿ. ಅದೇ ಬಾಣಲೆಯಲ್ಲಿ ಬೆಲ್ಲ ಹಾಕಿ ಸ್ವಲ್ಪ ನೀರು ಹಾಕಿ ಬೆಲ್ಲ ಕರಗಿದ ಮೇಲೆ ಮಾಡಿಟ್ಟ ಅನ್ನ, ಕೊಬ್ಬರಿ ತುರಿ, ಗೋಡಂಬಿ, ದ್ರಾಕ್ಷಿ, ಚಿಟಿಕೆ ಏಲಕ್ಕಿ ಪುಡಿ ಹಾಕಿ ಅನ್ನ ಪೂರ್ತಿಯಾಗಿ ಬೆಲ್ಲದ ಪಾಕವನ್ನು ಹೀರಿಕೊಳ್ಳುವವರೆಗೆ ಕಡಿಮೆ ಉರಿಯಲ್ಲಿ ಬೇಯಿಸಿದರೆ ಗುಡಾನ್ನ ಸಿದ್ಧ!
ಸಿಹಿ ನಿಮ್ಮ ರುಚಿಗೆ ತಕ್ಕ ಹಾಗೆ ಹಾಕಿ ಕೊಳ್ಳಿ.
ಹಾಗಾದರೆ ವರ ಮಹಾಲಕ್ಷಿಯ ಹಬ್ಬದಲ್ಲಿ ಈ ಗುಡಾನ್ನ ಮಾಡಿ ದೇವಿಯ ಕೃಪೆಗೆ ಪಾತ್ರರಾಗಿ.
ಧನ್ಯವಾದಗಳು.
Leave A Comment