ಎಲ್ಲರ ಮೆಚ್ಚಿನ, ಎಲ್ಲಾ ಕಾರ್ಯಕ್ರಮಗಳಲ್ಲೂ ತಪ್ಪದೆ ಮಾಡುವ ಆಹಾರ.

ಮಾಡುವ ವಿಧಾನ:-

ಪುಡಿ ಮಾಡಲು:-ಕಡಲೇ ಬೇಳೆ – 2 ಟೇಬಲ್ ಚಮಚ
ಧನಿಯಾ -1 ಟೇಬಲ್ ಚಮಚ
ಗಸಗಸೆ – 1 ಟೇಬಲ್ ಚಮಚ
ಉದ್ದಿನ ಬೇಳೆ – 1/2 ಟೇಬಲ್ ಚಮಚ
ಚಕ್ಕೆ – 1 ಇಂಚು
ಲವಂಗ _4
ಏಲಕ್ಕಿ – 2
ಬ್ಯಾಡಗಿ ಮೆಣಸಿನ ಕಾಯಿ – 10 ರಿಂದ 12 (ನಿಮ್ಮ ರುಚಿಗೆ ತಕ್ಕ ಹಾಗೆ)
ಕೊಬ್ಬರಿ ತುರಿ – 2 ಟೇಬಲ್ ಚಮಚ
ಮೇಲೆ ಹೇಳಿರುವ ಎಲ್ಲವನ್ನು ಬೇರೆ ಬೇರೆ ಎಣ್ಣೆ ಹಾಕದೆ ಹುರಿಯಿರಿ. ಮೆಣಸಿನ ಕಾಯಿ ಮಾತ್ರ ಸ್ವಲ್ಪ ಎಣ್ಣೆ ಹಾಕಿ ಹುರಿದು ಪುಡಿ ಮಾಡಿಡಿ.

   

1/4 ಕೇಜಿ ತೊಗರಿ ಬೇಳೆಯನ್ನು ತೊಳೆದು 1 ಚಮಚ ಎಣ್ಣೆ ಹಾಕಿ 2 ವಿಷಲ್ ಕೂಗಿಸಿಡಿ.

ನಿಮಗೆ ಇಷ್ಟವಾದ ತರಕಾರಿಗಳನ್ನು ತೊಳೆದು ಹೆಚ್ಚಿಡಿ. ಬೀನ್ಸ್, ಆಲೂಗೆಡ್ಡೆ, ಬಟಾಣಿ, ಕ್ಯಾರೆಟ್, ಕ್ಯಾಪ್ಸಿಕಮ್, ಗೋಬಿ ಮುಂತಾದ ತರಕಾರಿಗಳನ್ನು ಹಾಕಬಹುದು.

1/ 4 ಕೇಜಿ ಅಕ್ಕಿ ತೊಳೆದು ನೆನೆಸಿಡಿ.

ನಿಂಬೆ ಹಣ್ಣಿನ ಗಾತ್ರದ ಹುಣಿಸೆ ಹಣ್ಣು ನೆನೆಸಿಡಿ.

   

ಕುಕ್ಕರಿನಲ್ಲಿ 2 ಚಮಚ ಎಣ್ಣೆ ಹಾಕಿ ತರಕಾರಿಗಳನ್ನು ಹಾಕಿ ಸ್ವಲ್ಪ ಹುರಿದು, ನೆನೆಸಿದ ಅಕ್ಕಿ ಹಾಕಿ ಸ್ವಲ್ಪ ಹುರಿದು, ಮಾಡಿಟ್ಟ ಪುಡಿ, ಹುಣಿಸೆ ರಸ, ಸ್ವಲ್ಪ ಬೆಲ್ಲ, ಉಪ್ಪು ಹಾಕಿ ಕಲೆಸಿ, ಬೇಯಿಸಿ ತರಕಾರಿ, ಅಕ್ಕಿ ಬೆಂದ ಮೇಲೆ ಬೇಯಿಸಿದ ಬೇಳೆ ಸ್ವಲ್ಪ ನೀರು ಹಾಕಿ ಕುದಿಸಿ.

ಕೊನೆಯಲ್ಲಿ ಒಗ್ಗರಣೆಗೆ ಸಾಸಿವೆ, ಕರಿಬೇವು, ಇಂಗು, ಗೋಡಂಬಿ ಹಾಕಿ ಬೆಂದ ಅಕ್ಕಿ, ಬೇಳೆ ಮಿಶ್ರಣಕ್ಕೆ ಹಾಕಿದರೆ ರುಚಿಯಾದ ಬಿಸಿ ಬೇಳೆ ಬಾತ್ ಸಿದ್ಧ!

ನಿಮಗೆ ಸಮಯವಿದ್ದರೆ ಹೀಗೆ ಮಾಡಿ. ಇಲ್ಲದಿದ್ದರೆ ಬೇಳೆ ಮಾತ್ರ ಬೇಯಿಸಿ ಕೊಂಡು ಒಗ್ಗರಣೆ ಹಾಕಿ ತರಕಾರಿ, ಅಕ್ಕಿ, ಪುಡಿ, ಹುಣಿಸೆ ರಸ, ಉಪ್ಪು, ಚೂರು ಬೆಲ್ಲ, ನೀರು ಹಾಕಿ ಕುಕ್ಕರ್ ಮುಚ್ಚಳ ಮುಚ್ಚಿ 2 ವಿಷಲ್ ಕೂಗಿಸಿ, ಕೊನೆಯಲ್ಲಿ ತುಪ್ಪ ಹಾಕಿ ಒಗ್ಗರಣೆ ಹಾಕಿ ಕಲೆಸಿ.

ಆಲೂಗೆಡ್ಡೆ ಚಿಪ್ಸ್/ ಖಾರಾ ಬೂಂದಿ ಜೊತೆ ಬಡಿಸಿದರೆ ತುಂಬಾ ಚೆನ್ನಾಗಿರುತ್ತದೆ.

ಧನ್ಯವಾದಗಳು.