ಮಕ್ಕಳ Favourite ಗ್ರೇವಿ! ಮಾಡುವುದು ಬಹಳ ಸುಲಭ!

ಮಾಡುವ ವಿಧಾನ:-

1 ಹೆಚ್ಚಿದ ಆಲೂಗೆಡ್ಡೆ ಮತ್ತು 1 ಲೊಟ ಹಸಿ ಬಟಾಣಿಯನ್ನು ಕುಕ್ಕರಿನಲ್ಲಿ 1 ವಿಷಲ್ ಕೂಗಿಸಿಡಿ.

2 ಟೊಮ್ಯಾಟೋ ಬಿಸಿ ನೀರಲ್ಲಿ ಹಾಕಿ ಸಿಪ್ಪೆ ತೆಗೆದು 10 ಗೋಡಂಬಿ ಹಾಕಿ ನುಣ್ಣಗೆ ರುಬ್ಬಿಡಿ.

1 ಈರುಳ್ಳಿ ಸಣ್ಣಗೆ ಹೆಚ್ಚಿಡಿ.

   

ಬಾಣಲೆಯಲ್ಲಿ 2 ಚಮಚ ಎಣ್ಣೆಯನ್ನು ಹಾಕಿ ಜೀರಿಗೆ, ಹೆಚ್ಚಿದ ಈರುಳ್ಳಿ, ಸ್ವಲ್ಪ ಅರಿಶಿನ ಹಾಕಿ ಸ್ವಲ್ಪ ಹುರಿದು 1 ಚಮಚ Ginger garlic paste, 1 ಚಮಚ ಕಾರಾ ಪುಡಿ, 1/2 ಚಮಚ ಗರಂ ಮಸಾಲ, ಉಪ್ಪು, ರುಬ್ಬಿದ ಟೊಮ್ಯಾಟೋ ಮಿಶ್ರಣ ಹಾಕಿ ಕಡಿಮೆ ಉರಿಯಲ್ಲಿ ಕುದಿಸಿ ಬೇಯಿಸಿದ ಬಟಾಣಿ, ಆಲೂಗೆಡ್ಡೆ ಹಾಕಿ ಕಲೆಸಿ ಗ್ರೇವಿ ಎಣ್ಣೆಯನ್ನು ಬಿಡುವವರೆಗೆ ಕುದಿಸಿ ಕೊನೆಯಲ್ಲಿ 2 ಚಮಚ ಫ್ರೆಶ್ ಕ್ರೀಂ, ಕೊತ್ತಂಬರಿ ಸೊಪ್ಪು ಹಾಕಿದರೆ ರುಚಿಯಾದ ಆಲೂ ಮಟ್ಟರ್ ತಯಾರಾಗುತ್ತದೆ!

ಈ ಗ್ರೇವಿ ಚಪಾತಿ, ಪೂರಿಯೊಂದಿಗೆ ತುಂಬಾ ಚೆನ್ನಾಗಿರುತ್ತದೆ!

ಧನ್ಯವಾದಗಳು.