ಆಲೂಗೆಡ್ಡೆ ಎಲ್ಲರ Favorite ತರಕಾರಿ. ಇದರ ರುಚಿಯಾದ ಬಾತ್ ಮಾಡುವ ರೆಸಿಪಿ ಇಲ್ಲಿದೆ.

2 ಆಲೂಗೆಡ್ಡೆ ತೊಳೆದು ಸಿಪ್ಪೆ ತೆಗೆದು, ಉದ್ದಕ್ಕೆ ಹೆಚ್ಚಿಡಿ.

1 ಈರುಳ್ಳಿ ಸಣ್ಣಗೆ ಉದ್ದಕ್ಕೆ ಹೆಚ್ಚಿಡಿ.

1 ಪಾವು ಅಕ್ಕಿ ತೊಳೆದು ಅನ್ನ ಮಾಡಿ

   

4 ಚಮಚ ಪುದೀನಾ, 4 ಚಮಚ ಕೊತ್ತಂಬರಿ ಸೊಪ್ಪು, 3 ಹಸಿ ಮೆಣಸಿನ ಕಾಯಿ, 2 ಲವಂಗ, 1/2 ಇಂಚು ಚಕ್ಕೆ, 1 ಏಲಕ್ಕಿ ನೀರು ಹಾಕದೆ ತರಿ ತರಿಯಾಗಿ ರುಬ್ಬಿಡಿ.

ಬಾಣಲೆಯಲ್ಲಿ 4 ಚಮಚ ತುಪ್ಪ ಹಾಕಿ ಆಲೂಗೆಡ್ಡೆ ಹುರಿದು ತೆಗೆದಿಡಿ.

   

ಅದೇ ಬಾಣಲೆಯಲ್ಲಿ ಸಾಸಿವೆ, ಕರಿಬೇವು, ಸಣ್ಣಗೆ ಉದ್ದಕ್ಕೆ ಹೆಚ್ಚಿದ ಈರುಳ್ಳಿ ಹಾಕಿ ಬಾಡಿಸಿ, ರುಬ್ಬಿದ ಮಿಶ್ರಣ, ಉಪ್ಪು, ಹುರಿದಿಟ್ಟ ಆಲೂಗೆಡ್ಡೆ ಹಾಕಿ ಸ್ವಲ್ಪ ಹುರಿದು ಮಾಡಿಟ್ಟ ಅನ್ನ ಹಾಕಿ ಕಲೆಸಿ ಸ್ವಲ್ಪ ಬಿಸಿ ಮಾಡಿ ಕೊನೆಯಲ್ಲಿ ನಿಂಬೆ ರಸ ಹಾಕಿ ಕಲೆಸಿ ತಿನ್ನಲು ಕೊಡಿ.

ಧನ್ಯವಾದಗಳು.