UNDE PAYASA ಉಂಡೆ ಪಾಯಸ
ಮಾಡುವ ವಿಧಾನ:-
1 ಲೋಟ ಅಕ್ಕಿ 2 ಗಂಟೆ ನೆನೆಸಿಡಿ.
1/2 ಲೋಟ ಕಾಯಿ ತುರಿ ತುರಿದಿಡಿ.
1 ಲೋಟ ಬೆಲ್ಲ ತುರಿದಿಡಿ.
ಕಾಯಿ ತುರಿ ಮತ್ತು ಅಕ್ಕಿ ಸ್ವಲ್ಪ ನೀರು ಹಾಕಿ ನುಣ್ಣಗೆ ರುಬ್ಬಿ. ಚಿಟಿಕೆ ಉಪ್ಪು ಹಾಕಿ ಬಾಣಲೆಯಲ್ಲಿ ಹಾಕಿ ಚೆನ್ನಾಗಿ ಕಲೆಸುತ್ತಾ ಹಾಲು ಬಾಯಿ ಹದಕ್ಕೆ ಬರುವವರೆಗೆ ಬೇಯಿಸಿ.
(ರುಬ್ಬಿದ ಮಿಶ್ರಣ 1 ಚಮಚ ತೆಗೆದಿಟ್ಟುಕೊಂಡು ಸ್ವಲ್ಪ ನೀರಿಗೆ ಸೇರಿಸಿ ಚೆನ್ನಾಗಿ ಕಲೆಸಿಡಿ.)
ನಂತರ ಕೈಗೆ ಸ್ವಲ್ಪ ತುಪ್ಪ ಸವರಿ ಕೊಂಡು ಚಿಕ್ಕ ಚಿಕ್ಕ ಉಂಡೆಗಳನ್ನು ಮಾಡಿ ಕೊಂಡು ಇಡ್ಲಿಯ ಹಾಗೆ 6 ರಿಂದ 8 ನಿಮಿಷ Steam ಮಾಡಿಡಿ.
ಬಾಣಲೆಯಲ್ಲಿ 1 ಲೋಟ ಹಾಲು, ರುಬ್ಬಿದ ಮಿಶ್ರಣ ಕದಡಿಟ್ಟ ನೀರು, ಹಾಕಿ ಕಾದ ಮೇಲೆ ಬೆಲ್ಲ ತುರಿ ಹಾಕಿ, ಕುದಿಸಿ ಮಾಡಿಟ್ಟ ಉಂಡೆ ಗಳನ್ನು ಹಾಕಿ ಸ್ವಲ್ಪ ಕುದಿಸಿ ಕೊನೆಯಲ್ಲಿ ಚಿಟಿಕೆ ಏಲಕ್ಕಿ ಪುಡಿ, ತುಪ್ಪ ದಲ್ಲಿ ಹುರಿದ ಗೋಡಂಬಿ ದ್ರಾಕ್ಷಿ ಹಾಕಿದರೆ ರುಚಿಯಾದ ಉಂಡೆ ಪಾಯಸ ಸಿದ್ಧ!
ಬಿಸಿ ಅಥವಾ ತಣ್ಣಗಾದ (Fridge ನಲ್ಲಿ 1 ಗಂಟೆ ಇಡಬೇಕು) ನಿಮ್ಮ ಇಷ್ಟವಾದ ರೀತಿ ಸವಿಯಿರಿ.
ಧನ್ಯವಾದಗಳು.