ದಕ್ಷಿಣ ಭಾರತೀಯರ ಅಚ್ಚು ಮೆಚ್ಚಿನ ತಿಂಡಿ. ಮಾಡುವ ವಿಧಾನ:-

1 ಲೋಟ ಉದ್ದಿನ ಬೇಳೆ ತೊಳೆದು 2 ಗಂಟೆ ನೆನೆಸಿಡಿ. ‌ನೀರು ತೆಗೆದು ಆದಷ್ಚು ಕಡಿಮೆ ನೀರು ಹಾಕಿ ನುಣ್ಣಗೆ ರುಬ್ಬಿ. Grinder ನಲ್ಲಿ ರುಬ್ಬಿದರೆ ತುಂಬಾ ಚೆನ್ನಾಗಿರುತ್ತದೆ. ರುಬ್ಬಿದ ಮಿಶ್ರಣಕ್ಕೆ ಹೆಚ್ಚಿದ ಕೊತ್ತಂಬರಿ, ಕರಿಬೇವು, ಕುಟ್ಟಿದ ಮೆಣಸು, ಜೀರಿಗೆ ಸ್ವಲ್ಪ, ಉಪ್ಪು, ತುರಿದ ಶುಂಠಿ, 2 ಚಮಚ ಅಕ್ಕಿ ಹಿಟ್ಟು ಹಾಕಿ ಚೆನ್ನಾಗಿ ಕಲೆಸಿ. ಒಂದು ಬಾಳೆ ಎಲೆ ಅಥವಾ ವೀಳೆದೆಲೆ ಮೇಲೆ ಚಿಕ್ಕ ಉಂಡೆ ಮಾಡಿ ತಟ್ಟಿ ಕಾದ ಎಣ್ಣೆಯಲ್ಲಿ ಹಾಕಿ ಕೆಂಪಗೆ ಕರಿದು ತೆಗೆದಿಡಿ.

   

1 ಲೀಟರ್ ನೀರು ಬಿಸಿ ಮಾಡಿ ಸ್ವಲ್ಪ ಉಪ್ಪು ಹಾಕಿ ವಡೆಗಳನ್ನು ಹಾಕಿ 2 ನಿಮಿಷ ನೆನೆಯಲು ಬಿಟ್ಟು ನೀರನ್ನು ಹಿಂಡಿ ತೆಗೆದು ಒಂದು ತಟ್ಟೆಯಲ್ಲಿ ಜೋಡಿಸಿಡಿ.

ತಾಜಾ ಗಟ್ಟಿ ಮೊಸರಿಗೆ ಸ್ವಲ್ಪ ಸಕ್ಕರೆ, ಉಪ್ಪು ಹಾಕಿ ಚೆನ್ನಾಗಿ ಕಡೆದು, 2 ಚಮಚ ಕಾಯಿ ತುರಿ, ಹೆಚ್ಚಿದ ಕೊತ್ತಂಬರಿ ಸೊಪ್ಪು ಹಾಕಿ ಕಲೆಸಿಡಿ.

   

ಚಿಕ್ಕ ಬಾಣಲೆಯಲ್ಲಿ 1 ಚಮಚ ಎಣ್ಣೆ ಹಾಕಿ ಸಾಸಿವೆ, ಜೀರಿಗೆ, ಚಿಟಿಕೆ ಇಂಗು, ಕರಿಬೇವು ಹಾಕಿ ಒಗ್ಗರಣೆ ಹಾಕಿ ಮೆಾಸರಿಗೆ ಸೇರಿಸಿ ವಡೆಗಳ ಮೇಲೆ ಹಾಕಿ 30 ನಿಮಿಷದ ನೆನೆಯಲು ಬಿಡಿ.

ನಂತರ ಒಂದೊಂದೇ ವಡೆಗಳನ್ನು ಬೇರೆ ಬೇರೆ ಬಟ್ಟಲಿನಲ್ಲಿ ಹಾಕಿ ಮೇಲೆ ಮತ್ತಷ್ಟು ಮೊಸರಿನ ಮಿಶ್ರಣ , ತುರಿದ ಕ್ಯಾರೆಟ್, ಕೊತ್ತಂಬರಿ ಸೊಪ್ಪು, ಖಾರಾ ಬೂಂದಿ ಹಾಕಿ ಸವಿಯಿರಿ.

ಧನ್ಯವಾದಗಳು.