ಈ ದಿನ ನಮಗೆ ಸ್ವಾತಂತ್ರ ಸಿಕ್ಕಿದ ದಿನ, ನಮ್ಮ ಭಾರತದ ಹೆಮ್ಮೆಯ ಬಾವುಟದ ಬಣ್ಣದ ಒಂದು ಪಲಾವ್ ರೆಸಿಪಿ ಇಲ್ಲಿದೆ.

ಮಾಡುವ ವಿಧಾನ:-

1 ಲೋಟ ಬಾಸುಮತಿ ಅಕ್ಕಿ ತೊಳೆದು ಬಾಣಲೆಯಲ್ಲಿ ಬೇಯಿಸಿ ನೀರು ಸೋರಿ ಹಾಕಿ ಮೂರು ಭಾಗ ಮಾಡಿಡಿ.

ಕೇಸರಿ ಬಣ್ಣದ ಪಲಾವ್ ಮಾಡುವ ವಿಧಾನ:-

ಕ್ಯಾರೆಟ್, ಕೆಂಪು ಕ್ಯಾಪ್ಸಿಕಮ್ ಸಣ್ಣಗೆ ಹೆಚ್ಚಿಡಿ. 2 ಟೊಮೇಟೋ ತೊಳೆದು ನುಣ್ಣಗೆ ರುಬ್ಬಿ, ಶೋಧಿಸಿ ರಸ ತೆಗೆದಿಡಿ.

   

ಬಾಣಲೆಯಲ್ಲಿ 2 ಚಮಚ ಎಣ್ಣೆ ಹಾಕಿ ಹೆಚ್ಚಿದ ತರಕಾರಿ ಹಾಕಿ ಬೇಯಿಸಿ 1/2 ಚಮಚ ಖಾರಾ ಪುಡಿ, ಸ್ವಲ್ಪ Ginger garlic paste, ಟೊಮೇಟೋ ಪ್ಯೂರಿ, ಉಪ್ಪು ಹಾಕಿ ಕುದಿಸಿ, 1 ಭಾಗ ಅನ್ನ ಹಾಕಿ ಕಲೆಸಿದರೆ ಕೇಸರಿ ಬಣ್ಣದ ಪಲಾವ್ ಸಿದ್ಧ.

 

ಬಿಳಿ ಬಣ್ಣದ ಪಲಾವ್ ಮಾಡುವ ವಿಧಾನ:-

1 ಆಲೂಗೆಡ್ಡೆ, ಸ್ವಲ್ಪ ಗೋಭಿ ಸಣ್ಣಗೆ ಹೆಚ್ಚಿಡಿ. ಬಾಣಲೆಯಲ್ಲಿ 2 ಚಮಚ ಎಣ್ಣೆ ಹಾಕಿ ಹೆಚ್ಚಿದ ತರಕಾರಿ ಹಾಕಿ ಬೇಯಿಸಿ, 1/2 ಚಮಚ ಬಿಳಿ ಕಾಳು ಮೆಣಸಿನ ಪುಡಿ, ಸ್ವಲ್ಪ Ginger garlic paste, ಉಪ್ಪು , ಇನ್ನೊಂದು ಭಾಗ ಅನ್ನ ಹಾಕಿ ಕಲೆಸಿದರೆ ಬಿಳಿ ಬಣ್ಣದ ಪಲಾವ್ ಸಿದ್ಧ.

   

 

ಹಸಿರು ಬಣ್ಣದ ಪಲಾವ್ ಮಾಡುವ ವಿಧಾನ:-

ಹುರುಳೀ ಕಾಯಿ, ಕ್ಯಾಪ್ಸಿಕಮ್, ಬಟಾಣಿ ತಯಾರು ಮಾಡಿಟ್ಟುಕೊಳ್ಳಿ. 1 ಕಟ್ಟು ಪಾಲಾಕ್ ಸೊಪ್ಪು ಸ್ವಲ್ಪ ಬೇಯಿಸಿ, 2 ಹಸಿ ಮೆಣಸಿನ ಕಾಯಿ ಹಾಕಿ ರುಬ್ಬಿಡಿ.

ಬಾಣಲೆಯಲ್ಲಿ 2 ಚಮಚ ಎಣ್ಣೆ ಹಾಕಿ ತರಕಾರಿಗಳನ್ನು ಹಾಕಿ ಬೇಯಿಸಿ, ರುಬ್ಬಿದ ಪಾಲಾಕ್ ಮಿಶ್ರಣ, ಸ್ವಲ್ಪ Ginger garlic paste ಹಾಕಿ ಹಸಿ ವಾಸನೆ ಹೋಗುವವರೆಗೆ ಹುರಿದು, ಮತ್ತೊಂದು ಭಾಗ ಅನ್ನ, ಉಪ್ಪು ಹಾಕಿ ಕಲೆಸಿದರೆ ಹಸಿರು ಬಣ್ಣದ ಪಲಾವ್ ಸಿದ್ಧ.

ಕುಕ್ಕರಿನ ಬಟ್ಟಲಿಗೆ ಚೆನ್ನಾಗಿ ತುಪ್ಪ ಸವರಿ ಮೊದಲು ಕೇಸರಿ ಬಣ್ಣದ ಪಲಾವ್ ಹಾಕಿ ಚೆನ್ನಾಗಿ ಒತ್ತಿ. ನಂತರ ಬಿಳಿ ಬಣ್ಣದ ಪಲಾವ್ ಅದರ ಮೇಲೆ ಹರಡಿ ಚೆನ್ನಾಗಿ ಒತ್ತಿ. ಅದರ ಮೇಲೆ ಹಸಿರು ಬಣ್ಣದ ಪಲಾವ್ ಹರಡಿ ಚೆನ್ನಾಗಿ ಒತ್ತಿ ತಟ್ಟೆ ಮುಚ್ಚಿ ಕುಕ್ಕರಿನಲ್ಲಿ 6 ರಿಂದ 8 ನಿಮಿಷ ಇಡ್ಲಿ ತರಹ Steam ಮಾಡಿ.

ನಂತರ ಒಂದು ದೊಡ್ಡ ತಟ್ಟೆಯಲ್ಲಿ ಕುಕ್ಕರ್ ಬಟ್ಟಲಿನ ಸುತ್ತಲೂ ಚಾಕುವುನಿಂದ ಎಚ್ಚರಿಕೆಯಿಂದ ಸ್ವಲ್ಪ ಪಲಾವ್ ಅನ್ನು ಬಿಡಿಸಿ, ತಲೆ ಕೆಳಗಾಗಿ ಎಚ್ಚರಿಕೆಯಿಂದ ಹಾಕಿ ಮೇಲೆ ಸ್ವಲ್ಪ ಮೆತ್ತಗೆ ತಟ್ಚಿದರೆ ತ್ರಿರಂಗಿ ಪಲಾವ್ ದೊಡ್ಡ ಕೇಕ್ ನ ಹಾಗೆ ಬರುತ್ತದೆ.

ನಿಮಗೆ ಬೇಕಾದಷ್ಟು ಕಟ್ ಮಾಡಿ ಹಾಕಿ ಕೊಂಡು ತಿನ್ನಬಹುದು!

ಧನ್ಯವಾದಗಳು.