ಪಲಾವ್ ಯಾವುದೇ ವಿಧದಲ್ಲಿ ಮಾಡಿದರೂ ತುಂಬಾ ಚೆನ್ನಾಗಿರುತ್ತದೆ. ಬಹು ಜನಪ್ರಿಯ ಆಹಾರ. ಈ ರೆಸಿಪಿ ತುಂಬಾ ಸಿಂಪಲ್! ಆದರೆ ಅಷ್ಟೇ ರುಚಿಕರ!

ಮಾಡುವ ವಿಧಾನ:-

ನಿಮಗೆ ಬೇಕಾದ ತರಕಾರಿಗಳನ್ನು ತೊಳೆದು ಹೆಚ್ಚಿಡಿ.

1 ಲೋಟ ಬಾಸುಮತಿ ಅಕ್ಕಿ ತೊಳೆದು ನೀರು ಸೋರಿ ಹಾಕಿಡಿ.

1 ಇಂಚು ಚಕ್ಕೆ, 4 ಲವಂಗ, 2 ಏಲಕ್ಕಿ, 8 ಕಾಳು ಮೆಣಸು, 6 ಬ್ಯಾಡಗಿ ಮೆಣಸಿನ ಕಾಯಿ, 1 ಸಿಪ್ಪೆ ತೆಗೆದ ಬೆಳ್ಳುಳ್ಳಿ ಇಷ್ಟನ್ನು ಸ್ವಲ್ಪ ಎಣ್ಣೆ ಹಾಕಿ ಹುರಿದು ಪುಡಿ ಮಾಡಿಡಿ ‌.

   

ಕುಕ್ಕರಿನಲ್ಲಿ 4 ಚಮಚ ಎಣ್ಣೆ ಹಾಕಿ, ತರಕಾರಿಗಳನ್ನು ಹಾಕಿ ಸ್ವಲ್ಪ ಹುರಿದು, ಬಾಸುಮತಿ ಅಕ್ಕಿ, ಮಸಾಲ ಪುಡಿ, ಉಪ್ಪು ಹಾಕಿ ಕಲೆಸಿ, 2 ಲೋಟ ನೀರು ಹಾಕಿ ಕುಕ್ಕರ್ ಮುಚ್ಚಳ ಮುಚ್ಚಿ ವೇಟ್ ಹಾಕದೆ ದೊಡ್ಡದಾಗಿ ಸ್ಟೀಮ್ ಬರಲು ಪ್ರಾರಂಭವಾದಾಗ ಉರಿ ಪೂರ್ತಿ ಕಡಿಮೆ ಮಾಡಿ 10 ರಿಂದ 15 ನಿಮಿಷ ಬೇಯಿಸಿದರೆ ರುಚಿಯಾದ ಸಿಂಪಲ್ ವೆಜ್ ಪಲಾವ್ ಸಿದ್ಧ.

ನಿಮಗೆ ಸಮಯವಿಲ್ಲದಿದ್ದರೆ ಮುಚ್ಚಳ ಹಾಕಿ ವೇಟ್ ಹಾಕಿ 1 ವಿಷಲ್ ಕೂಗಿಸಿ ಕೂಡಾ ಮಾಡಬಹುದು.

ಬೆಳ್ಳುಳ್ಳಿ ಬೇಡದವರು ಇದೇ ವಿಧಾನದಲ್ಲಿ ಸ್ವಲ್ಪ ಪುದೀನಾ ಒಗ್ಗರಣೆಗೆ ಹಾಕಿ ಮಾಡಬಹುದು.

ಖಾರಾ ನಿಮ್ಮ ರುಚಿಗೆ ತಕ್ಕ ಹಾಗೆ ಹಾಕಿಕೊಳ್ಳಿ. ಮೆಣಸು ಮತ್ತು ಬ್ಯಾಡಗಿ ಮೆಣಸಿನ ಕಾಯಿ ಎರಡೂ ಹಾಕುವುದರಿಂದ ನೋಡಿ ಹಾಕಿ.

ಧನ್ಯವಾದಗಳು.