ಕೇರಳದಲ್ಲಿ ಹಬ್ಬಗಳಲ್ಲಿ ತಪ್ಪದೆ ಮಾಡುವ ಸಿಹಿ ಇದು! ಸುಲಭವಾಗಿ, ರುಚಿಯಾಗಿ ಮಾಡಬಹುದಾದ ಸಿಹಿ ರೆಸಿಪಿ ನೋಡೋಣವೇ!?

ಮಾಡುವ ವಿಧಾನ:-

1 ಲೋಟ ಹೆಸರು ಬೇಳೆ, 1/4 ಲೋಟ ಅಕ್ಕಿ ತುಪ್ಪ ಹಾಕಿ ಹುರಿದು 2 ವಿಷಲ್ ಕೂಗಿಸಿಡಿ.

1 ಲೋಟ ಬೆಲ್ಲ ಪುಡಿ ಮಾಡಿಡಿ.

ಕಾಯಿ ತುರಿದು ಸ್ವಲ್ಪ ನೀರು ಹಾಕಿ ನುಣ್ಣಗೆ ರುಬ್ಬಿ ಶೋಧಿಸಿ ಕಾಯಿ ಹಾಲು 1 ಲೋಟ ತೆಗೆದಿಡಿ.

ಸ್ವಲ್ಪ ಗೋಡಂಬಿ ದ್ರಾಕ್ಷಿ ತುಪ್ಪದಲ್ಲಿ ಹುರಿದಿಡಿ.

   

ಚಿಟಿಕೆ ಏಲಕ್ಕಿ ಪುಡಿ ಮಾಡಿಡಿ.

ಬೆಲ್ಲದ ಪುಡಿಗೆ ಸ್ವಲ್ಪ ನೀರು ಹಾಕಿ ಕುದಿಯಲು ಇಡಿ. ಬೆಲ್ಲ ಕರಗಿದ ಮೇಲೆ ಬೆಂದ ಹೆಸರು ಬೇಳೆ ಮಿಶ್ರಣ, ಕಾಯಿ ಹಾಲು ಹಾಕಿ ಚೆನ್ನಾಗಿ ಕಲೆಸಿ.

   

ಪಾಯಸ ಒಂದು ಕುದಿ ಬಂದ ತಕ್ಷಣ ಒಲೆಯಿಂದ ಇಳಿಸಿ, ಏಲಕ್ಕಿ ಪುಡಿ, ಹುರಿದ ಗೋಡಂಬಿ ದ್ರಾಕ್ಷಿ ಹಾಕಿದರೆ, ರುಚಿಯಾದ, ಸುಲಭವಾಗಿ ಮಾಡಬಹುದಾದ ಸಾದಾ ಸಾಧ್ಯಂ ಸಿದ್ಧ!

ಧನ್ಯವಾದಗಳು.