ಯಾರಿಗೆ ಇಷ್ಟ ಇಲ್ಲ ಹೇಳಿ! ಹೊರಗಡೆಯಿಂದ ತಂದು ಯಾವಾಗಲೂ ತಿನ್ನುತ್ತೇವೆ. ಮನೆಯಲ್ಲಿ ಸುಲಭವಾಗಿ ಮಾಡುವ ವಿಧಾನ ಇಲ್ಲಿದೆ!

  

ನಿಮಗೆ ಬೇಕಾದಷ್ಟು ಆಲೂಗೆಡ್ಡೆ ತೊಳೆದು ಸಿಪ್ಪೆ ತೆಗೆದು Slicer ನಲ್ಲಿ ತೆಳ್ಳಗೆ Slice ಮಾಡಿಕೊಳ್ಳಿ.

ತಣ್ಣನೆಯ ನೀರಿಗೆ 1 ಚಮಚ ಉಪ್ಪು ಹಾಕಿ ಆಲೂಗೆಡ್ಡೆ Slice ಗಳನ್ನು ಹಾಕಿ 15 ನಿಮಿಷ ಇಡಿ.

  

ನಂತರ ನೀರು ಪೂರ ಸೋರಿ ಹಾಕಿ, ಒಗೆದ ಟವೆಲ್/ ಕಿಚನ್ ಟವೆಲ್ ಮೇಲೆ ಹಾಕಿ ಪೂರ್ಣವಾಗಿ ಒಣಗಿಸಿ. ನೀರಿನಂಶ ಸ್ವಲ್ಪವೂ ಇರಬಾರದು!

 

ಬಾಣಲೆಯಲ್ಲಿ ಎಣ್ಣೆ ಹಾಕಿ ಕಾದ ಮೇಲೆ ಸ್ವಲ್ಪ ಸ್ವಲ್ಪ ಆಲೂಗೆಡ್ಡೆ Slices ಹಾಕಿ ಕೆಂಪಗೆ ಕಡಿಮೆ ಉರಿಯಲ್ಲಿ ಕರಿದು ಹೆಚ್ಚಿನ ಎಣ್ಣೆ ತೆಗೆದು ಬಿಸಿಯಿದ್ದಾಗಲೇ ಉಪ್ಪು ಖಾರಾ, ಇಂಗು ಹಾಕಿ ಕಲೆಸಿ ಗಾಳಿಯಾಡದ ಡಬ್ಬದಲ್ಲಿ ಹಾಕಿಡಿ‌.

ಧನ್ಯವಾದಗಳು