ಬೀನ್ಸ್ ಪಲ್ಯ ಸಾಮಾನ್ಯವಾಗಿ ಎಲ್ಲರೂ ಕಾಯಿ ತುರಿ, ಇಂಗಿನ ಒಗ್ಗರಣೆ ಹಾಕಿ ಮಾಡುತ್ತಾರೆ. North Indian Style ನಲ್ಲಿ ಬೀನ್ಸ್ ಪಲ್ಯ ಮಾಡುವ ರೆಸಿಪಿ ಇಲ್ಲಿದೆ.
ಮಾಡುವ ವಿಧಾನ:-
1/4 ಕೇಜಿ ಎಳೆಯ ಬೀನ್ಸ್ ತೊಳೆದು, ನಾರು ಬಿಡಿಸಿ, 2 ಇಂಚು ಉದ್ದಕ್ಕೆ ಹೆಚ್ಚಿಟ್ಟು ಕೊಳ್ಳಿ.
1 ಈರುಳ್ಳಿ ಸಣ್ಣಗೆ ಹೆಚ್ಚಿಡಿ.
ಬಾಣಲೆಯಲ್ಲಿ ನೀರು ಹಾಕಿ ಹೆಚ್ಚಿದ ಬೀನ್ಸ್, ಚಿಟಿಕೆ ಸಕ್ಕರೆ ಹಾಕಿ ಬೀನ್ಸ್ ಹುರುಳಿ ಕಾಯಿ ಪೂರ್ಣವಾಗಿ ಬೇಯಿಸಿ ನೀರು ಸೋರಿ ಹಾಕಿ. (ಈ ನೀರನ್ನು ಸಾಂಬಾರು ಅಥವಾ ಸಾರಿಗೆ ಹಾಕಿ)
ಬಾಣಲೆಯಲ್ಲಿ 2 ಚಮಚ ಎಣ್ಣೆ ಹಾಕಿ ಜೀರಿಗೆ, ಹೆಚ್ಚಿದ ಈರುಳ್ಳಿ, 1 ಚಮಚ Ginger garlic paste ಹಾಕಿ ಸ್ವಲ್ಪ ಬಾಡಿಸಿ, 1 ಚಮಚ ಖಾರಾ ಪುಡಿ, 1/2 ಚಮಚ ಗರಂ ಮಸಾಲ, 1/4 ಚಮಚ ಧನಿಯ ಪುಡಿ, 1/4 ಚಮಚ ಆಮ್ ಚೂರ್ ಪುಡಿ, ಉಪ್ಪು ಹಾಕಿ ಬಾಡಿಸಿ, ಬೇಯಿಸಿದ ಬೀನ್ಸ್ ಹಾಕಿ ಕೊನೆಯಲ್ಲಿ ಕೊತ್ತಂಬರಿ ಸೊಪ್ಪುಹಾಕಿ ಕಲೆಸಿದರೆ ರುಚಿಯಾದ ಮಸಾಲ ಬೀನ್ಸ್ ಪಲ್ಯ ಸಿದ್ಧ!
ಚಪಾತಿ, ಅನ್ನ ಸಾರು ಜೊತೆ Side dish ಆಗಿ ತುಂಬಾ ಚೆನ್ನಾಗಿರುತ್ತದೆ.
ಧನ್ಯವಾದಗಳು.
Leave A Comment