KADALE BEEJADA UNDE ಕಡಲೇ ಬೀಜದ ಉಂಡೆ
Indu Jayaram
SHARE
ಹಬ್ಬಗಳಲ್ಲಿ ಸಾಧಾರಣವಾಗಿ ಎಲ್ಲರೂ ಮಾಡುತ್ತಾರೆ. ಸುಲಭವಾಗಿ ಮಾಡುವ ರೆಸಿಪಿ ಇಲ್ಲಿದೆ.
ಮಾಡುವ ವಿಧಾನ:-
1 ಅಳತೆ ಕಡಲೇ ಬೀಜ ಹುರಿದು ಸಿಪ್ಪೆ ತೆಗೆದಿಡಿ.
1 ಅಳತೆ ಬೆಲ್ಲ ಪುಡಿ ಮಾಡಿಡಿ.
ಬಾಣಲೆಯಲ್ಲಿ ಬೆಲ್ಲದ ಪುಡಿ ಹಾಕಿ 1/2 ಅಳತೆ ನೀರು ಹಾಕಿ ಕುದಿಯಲು ಇಡಿ. ಬೆಲ್ಲ ಕರಗಿ ಕುದಿಯಲು ಆರಂಭವಾದಾಗ ತಿರುಗಿಸುತ್ತಾ ಇರಿ. ಉರಿ ಮಧ್ಯಮ ಇರಲಿ. ಬೆಲ್ಲ ಕುದಿದು ಎರಡೆಳೆ ಪಾಕ ಬಂದಾಗ ಕಡಲೇ ಬೀಜ ಹಾಕಿ ಉರಿ ಪೂರ್ತಿ ಕಡಿಮೆ ಮಾಡಿ ಒಂದು ನಿಮಿಷ ಕಲೆಸಿ ಒಲೆಯಿಂದ ಇಳಿಸಿ. ಚಿಟಿಕೆ ಏಲಕ್ಕಿ ಪುಡಿ ಬೇಕಾದರೆ ಹಾಕಿ ಕಲೆಸಿ. ಸ್ವಲ್ಪ ಬಿಸಿ ಕಡಿಮೆ ಆಗ ಮೇಲೆ ನಿಮಗೆ ಬೇಕಾದ ಅಳತೆಯ ಉಂಡೆ ಮಾಡಿಡಿ.
ಇದೇ ರೀತಿ ನೀವು ಬೇಕಾದರೆ ಉಂಡೆ ಬದಲು ಕಿಕ್ಕಿರಿದು ಮಾಡಬಹುದು.
ಒಲೆಯಿಂದ ಇಳಿಸಿದ ಮೇಲೆ ತುಪ್ಪ ಸವರಿದ ತಟ್ಟೆಗೆ ಸುರಿದು, ಸ್ವಲ್ಪ ಬೆಚ್ಚಗೆ ಆದ ಮೇಲೆ ನಿಮಗೆ ಬೇಕಾದ ಆಕಾರದಲ್ಲಿ ಕಟ್ ಮಾಡಿ ತಣ್ಣಗಾದ ಮೇಲೆ ಡಬ್ಬಗಳಲ್ಲಿ ಹಾಕಿಸಿ.
ಧನ್ಯವಾದಗಳು