ಆರೋಗ್ಯಕರ, ಸುಲಭವಾಗಿ ಮಾಡುವ ಪಾಯಸ!

ಮಾಡುವ ವಿಧಾನ:-

1 ಲೋಟ ಬ್ರೋಕನ್ ಗೋಧಿ ಮತ್ತು 2 ಟೇಬಲ್ ಚಮಚ ಕಡಲೇ ಬೇಳೆ/ಹೆಸರು ಬೇಳೆ ಹಾಕಿ 4 ವಿಷಲ್ ಕೂಗಿಸಿಡಿ.

1 ಲೋಟದಷ್ಟು ಕಾಯಿ ಹಾಲು ತೆಗೆದಿಡಿ.

3/4 ಲೋಟ ಬೆಲ್ಲ ಸಣ್ಣಗೆ ಹೆಚ್ಚಿ ಕರಗಿಸಿಡಿ.

ಸ್ವಲ್ಪ ಗೋಡಂಬಿ, ದ್ರಾಕ್ಷಿ ತುಪ್ಪ ಹಾಕಿ ಹುರಿದಿಡಿ.

ಬೆಂದ ಗೋಧಿ ಮಿಶ್ರಣಕ್ಕೆ, ಬೆಲ್ಲದ ಪಾಕ ಹಾಕಿ ಕುದಿಸಿ ಕೊನೆಯಲ್ಲಿ ಕಾಯಿ ಹಾಲು, ಹುರಿದ ಗೋಡಂಬಿ, ದ್ರಾಕ್ಷಿ, ಚಿಟಿಕೆ ಏಲಕ್ಕಿ ಪುಡಿ ಹಾಕಿದರೆ ರುಚಿಯಾದ ಗೋಧಿ ಪಾಯಸ ಸಿದ್ಧ.

ಧನ್ಯವಾದಗಳು.